Header Ads
Header Ads
Header Ads
Breaking News

11 ನೇ ವರ್ಷದ “ಆಳ್ವಾಸ್ ಚಿತ್ರಸಿರಿ-2017″ಕ್ಕೆ ಚಾಲನೆ ಚಿತ್ರಕಲೆಗೆ ಆಧ್ಯಾತ್ಮಿಕ ಸ್ಪರ್ಶವಿದೆ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ನುಡಿಸಿರಿಗೆ ಪೂರಕವಾಗಿ ಪುತ್ತಿಗೆಯಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ರಾಜ್ಯಮಟ್ಟದ 11 ನೇ ವರ್ಷದ ಚಿತ್ರಕಲಾ ಶಿಬಿರ “ಆಳ್ವಾಸ್ ಚಿತ್ರಸಿರಿ-2017″ಕ್ಕೆ ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡಿದ ಅವರು ಭಾರತೀಯ ಚಿತ್ರಕಲೆಗೆ ಆಧ್ಯಾತ್ಮಿಕ ಸ್ಪರ್ಶವಿದೆ. ಕಲೆಯ ಮೂಲಕ ಜೀವನದ ಪರಿಪೂರ್ಣತೆಯನ್ನು ಕೊಡುವುದೇ ಕಲಾವಿದನ, ಕಲೆಯ ಮುಖ್ಯ ಉದ್ದೇಶವಾಗಿದೆ ಎಂದು ಅವ್ರು ಹೇಳಿದರು.

ಇನ್ನೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಚಿತ್ರಸಿರಿ ಮೂಲಕ ಚಿತ್ರಕಲೆಯ ಸಾಧ್ಯತೆಗೆ ಹೊಸ ಆಯಾಮ ನೀಡುವಂತಹ ಕೆಲಸವನ್ನು ಆಳ್ವಾಸ್ ಪ್ರತಿವರ್ಷ ಮಾಡುತ್ತಿದೆ. ಶಿಬಿರದ ಮೂಲಕ ಕಲಾವಿದರ ಕಲಾ ನೈಪುಣ್ಯತೆ ಅರಳುತ್ತಿರುವುದು ಮಾತ್ರವಲ್ಲ, ಕಲೆಯ ಕುರಿತು ವಿಚಾರ ವಿನಿಮಯಗಳು ಕೂಡ ನಡೆಯುತ್ತಿದೆ ಎಂದು ಅವ್ರು ಹೇಳಿದರು. ಈ ವೇಳೆ ಉಡುಪಿ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಮುಖ್ಯ ಅತಿಥಿಯಾಗಿದ್ದರು.

ಶಿಬಿರ ಸಲಹಾ ಸಮಿತಿಯ ಸದಸ್ಯರಾದ ಗಣೇಶ್ ಸೋಮಯಾಜಿ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.

Related posts

Leave a Reply