Header Ads
Header Ads
Breaking News

12ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಸ್ಥಾವರ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಉದ್ಘಾಟನೆ.

ಶೇಖಾ ಮರ್ಕಝ್ ಯೂತ್ ವೆಲ್ಫೇರ್ ಅಸೊಶಿಯೇಷನ್ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಕಿನ್ಯ ಗ್ರಾಮದ ಖುತುಬಿನಗರದಲ್ಲಿ ೧೨ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಸ್ಥಾವರವನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಸರಕಾರದ ಜತೆಗೆ ಸೇರಿಕೊಂಡು ಜನರಿಗೆ ಒಳಿತಾಗಬೇಕು ಅನ್ನುವ ಮನೋಭಾವದೊಂದಿಗೆ ಕಾರ್‍ಯಾಚರಿಸಿ ಗ್ರಾಮದ ಜನರಿಗೆ ಬಹುಮುಖ್ಯವಾದ ಕುಡಿಯುವ ನೀರು ಪೂರೈಸಿದ ಸಂಘಟನೆ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮೋಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೋಳಿಯರ್,ಶೇಖಾ ಮರ್ಕಝ್ ಯೂತ್ ವೆಲ್ಫೇರ್ ಅಸೊಶಿಯೇಷನ್ ಅಧ್ಯಕ್ಷ ಅಬೂಬಕ್ಕರ್, ಉಪಾಧ್ಯಕ್ಷ ಅಶ್ರಫ್, ದಾರುಲ್ ಅಶ್-ಅರಿಯ್ಯಾ ವಿದ್ಯಾ ಸಂಸ್ಥೆಯ ಮಾನ್ಯನೇಜರ್ ಸಿ.ಎಚ್ ಮುಹಮ್ಮದಲಿ ಸಖಾಫಿ, ಕಿನ್ಯ ಗ್ರಾ.ಪಂ ಉಪಾಧ್ಯಕ್ಷ ಸಿರಾಜ್ ಕಿನ್ಯ, ಸದಸ್ಯರಾದ ಮಾಹಾಬಲ ಪೂಂಜಾ, ಫಾರೂಕ್ ಕಿನ್ಯ, ಮಹಮ್ಮದ್ ಕಿನ್ಯ, ಕಿನ್ಯ ಜಮಾಅತ್ ಪ್ರ.ಕಾರ್ಯದರ್ಶಿ ಅಬೂಸಾಲಿ ಹಾಜಿ ಕುರಿಯ್ಯಾಕಾರ್, ಬದ್ರಿಯ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಕೆ.ಎಂ ಅಬ್ಬಾಸ್, ನಿಸಾರ್ ಪಾವೂರು, ಕೆ.ಎಂ ಮುಸಾಬ್ಬ ಹಾಜಿ ದುಬೈ, ಸ್ಥಳೀಯರಾದ ಕೆ.ಎಂ ಮುಸಾಬ್ಬ, ಡಿ.ಕೆ ಅಬೂಬಕ್ಕರ್, ಜಮಾಲುದ್ದೀನ್ ಮಿತ್ತಡ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.

Related posts

Leave a Reply