Header Ads
Header Ads
Header Ads
Breaking News

14ನೇ ವರ್ಷದ ಲವ-ಕುಶ ಜೋಡುಕೆರೆ ಬಯಲು ಕಂಬಳ ಜನವರಿ 6 ರಂದು ಕಂಬಳ ಉದ್ಘಾಟನೆ ಶಾಸಕ ವಿ. ಸುನೀಲ್ ಕುಮಾರ್ ಮಾಹಿತಿ

ಕಾರ್ಕಳದ ಮಿಯ್ಯಾರಿನಲ್ಲಿ 14 ನೇ ವರ್ಷದ ಲವ-ಕುಶ ಜೋಡುಕೆರೆ ಬಯಲು ಕಂಬಳ ಮಹೋತ್ಸವ ಜನವರಿ 6 ರಂದು ಉದ್ಘಾಟನೆಗೊಳ್ಳಲಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.

ಅವರು ಕಾರ್ಕಳ ಪ್ರವಾಸಿ ಬಂಗಲೆಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾರ್ಯಕ್ರಮದಲ್ಲಿ ಸಹಕಾರ ರತ್ನ ಪುರಸ್ಥತರಾದ ಡಾ| ಎಂ ಎನ್ ರಾಜೇಂದ್ರ ಕುಮಾರ್‌ರವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮವಿರುತ್ತದೆ ಎಂದು ಹೇಳಿದರು. ಸಂಘಟನಾ ಕಾರ್ಯದರ್ಶಿ ಪ್ರೋ. ಕೆ ಗುಣಪಾಲ ಕಡಂಬ ಮಾತಾನಾಡಿ ಈಗಾಗಲೇ ಪ್ರಾಣಿದಯ ಸಂಘದವರು ತಮಗೆ ಬೇಕಾದ ಹಾಗೆ ಪ್ರಾಣಿಗಳ ಚಿತ್ರದ ತುಣುಕುಗಳನ್ನು ನ್ಯಾಯಲಯಕ್ಕೆ ಹಾಜರು ಪಡಿಸಿ ಕಂಬಳ ಪ್ರೇಮಿಗಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಜೀವನ್‌ದಾಸ್ ಅಡ್ಯಂತಾಯ ಶ್ಯಾಮ ಶೆಟ್ಟಿ ಮತ್ತಿತ್ತರರು ಉಪಸ್ಥಿತರಿದ್ದರು.

Related posts

Leave a Reply