Header Ads
Header Ads
Breaking News

15ನೇ ವರ್ಷದ ’ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ : ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಕಾರ್ಯಕ್ರಮ

ಕರಾವಳಿಯ ಪ್ರತಿಷ್ಠಿತ ಪತ್ರಿಕೆಯಾದ ಪಿಂಗಾರ ಪತ್ರಿಕೆಯ ವತಿಯಿಂದ 15ನೇ ವರ್ಷದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಈ ಬಾರಿಯ ಪ್ರಶಸ್ತಿಯನ್ನು ಸೊಳ್ಳೆ ನಿರ್ಮೂಲನ ಯಂತ್ರ ಮೋಝಿಕ್ವಿಟ್‌ನ್ನು ಅನ್ವೇಷಣೆ ಮಾಡಿದ ಇಗ್ನೇಷಿಯಸ್ ಓರ್ವಿನ್ ನೊರೊನ್ಹಾ ಅವರಿಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳಾದ ಅತೀ ವಂದನೀಯ ರೆ.ಫಾದರ್ ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪ್ರದಾನ ಮಾಡಿದ್ರು.

ಕರಾವಳಿಯ ಹೆಸರಾಂತ ಪತ್ರಿಕೆಗಳಲ್ಲೊಂದಾ ಪಿಂಗಾರ ಪತ್ರಿಕೆ ವತಿಯಿಂದ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷ ಕೊಡಮಾಡಲಾಗುತ್ತದೆ. ಈ ಬಾರಿ 15ನೇ ವರ್ಷದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರುಗಳಾದ ಅತೀವಂದನೀಯ ರೆ.ಫಾದರ್ ಪೀಟರ್ ಪಾವ್ಲ್ ಸಲ್ಡಾನ್ಹಾರವರು ಪಿಂಗಾರವನ್ನು ಅರಳಿಸಿ ಉದ್ಘಾಟಿಸಿ. ಸೊಳ್ಳೆ ನಿರ್ಮೂಲನ ಯಂತ್ರ ಮೋಝಿ ಕ್ವಿಟ್‌ನ್ನು ಅನ್ವೇಷಣೆ  ಮಾಡಿದ ಇಗ್ನೇಷಿಯಸ್ ಓರ್ವಿನ್ ನೊರೊನ್ಹಾ ಅವರಿಗೆ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಬಳಿಕ ಮಾತನಾಡಿ ಸೊಳ್ಳೆಯಿಂದ ಅನೇಕ ರೋಗಗಳು ಹರಡುತ್ತದೆ. ಇತ್ತೀಚಗೆ ಮಂಗಳೂರಿನಲ್ಲಿ ಕೂಡ ನಾವು ಡೆಂಗ್ಯೂ ಹಾವಳಿಯನ್ನು ಕಂಡಿದ್ದೇವೆ. ಆದರೆ ಇಗ್ನೇಷಿಯಸ್ ಓರ್ವಿನ್ ನೊರೊನ್ಹಾರವರು ಸೊಳ್ಳೆ ಹಿಡಿಯುವ ಯಂತ್ರವನ್ನು ಕಂಡುಹಿಡಿದು ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಈ ಸೊಳ್ಳೆಯನ್ನು ಹಿಡಿಯಲು ಅನೇಕ ಉಪಕರಣಗಳು ಇದೆ. ಆದರೆ ಮೋಝಿಕ್ವಿಟ್ ಯಂತ್ರ ಪರಿಸರ ಸ್ನೇಹಿಯಾದ ಯಂತ್ರ ಈ ಯಂತ್ರದಿಂದ ಸೊಳ್ಳೆ ನಿವಾರಣೆಯ ಜೊತೆಗೆ ಉದ್ಯೋಗವೂ ಸೃಷ್ಟಿಯಾಗಿದೆ ಎಂದು ಹೇಳಿದರು. ಬಳಿಕ ಪಿಂಗಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದು ಇಗ್ನೇಷಿಯಸ್ ಓರ್ವಿನ್ ನೊರೊನ್ಹಾರವರು ಮಾತನಾಡಿ ನನಗೆ ಈ ಪ್ರಶಸ್ತಿಗೆ ಆಯ್ಕೆಮಾಡಿದ ಪ್ರತಿಯೊಬ್ಬರಿಗೂ ನಾನು ಅಭಿನಂದನೆಯನ್ನು ತಿಳಿಸುತ್ತೇನೆ. ನನ್ನ ಈ ಸಾಧನೆಗೆ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ಗೌರವಗಳು ಲಭಿಸಿದೆ. ಆದರೆ ನನ್ನ ಹುಟ್ಟುರಲ್ಲಿ ಕೊಡಮಾಡುವ ಈ ಗೌರವ ಬಹಳಾ ಸಂತೋಷ ತಂದಿದೆ. ನಮ್ಮ ಯಂತ್ರ ಹೆಣ್ಣುಸೊಳ್ಳೆಯನ್ನು ಹಿಡಿದು ಕೊಂದು ಸೊಳ್ಳೆಯ ಸಂತತಿಯನ್ನೇ ನಿರ್ಣಾಮ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸಂಚಾಲಕ ರೋಯ್ ಕ್ಯಾಸ್ತೆಲಿನೊ, ಮಂಗಳೂರು ಚುಟುಕು ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸುರೇಶ್ ನೆಗಲಗುಳಿ, ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಐವನ್ ಡಿ’ಸೋಜಾ, ಪಿಂಗಾರ ಪತ್ರಿಕೆಯ ಸಂಪಾದಕರಾದ ರೈಮಂಡ್ ಡಿಕುನಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *