Header Ads
Header Ads
Breaking News

ಮಂಗಳೂರಿನಲ್ಲಿ ಮಹಾಮಳೆಯ ಅವಾಂತರ ತುಂಬೆ ಡ್ಯಾಂನಲ್ಲಿ ಕೆಸರು ಮಿಶ್ರಿತ ನೀರು

ಮಂಗಳೂರಿನಲ್ಲಿ ಸುರಿದ ಮಹಾ ಮಳೆಯಿಂದಾಗಿ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂನಲ್ಲಿ ಕೆಸರು ಮಿಶ್ರಿತ ನೀರು ತುಂಬಿ ಒಂದು ವಾರದಿಂದ ನಗರಕ್ಕೆ ಕೆಂಬಣ್ಣದ ನೀರು ಪೂರೈಕೆಯಾಗುತ್ತಿದೆ. ಸಾರ್ವಜನಿಕರಲ್ಲಿ ರೋಗದ ಆತಂಕ ಮನೆ ಮಾಡಿದೆ.ಕಳೆದ ವಾರ ಸುರಿದ ಭಾರಿ ಮಳೆಯಿಂದಾಗಿ ಮಂಗಳೂರಿನ ಜನತೆಗೆ ಪೂರೈಕೆಯಗುತ್ತಿರುವ ತುಂಬೆ ಡ್ಯಾಂನಲ್ಲಿ ಕೆಸರು ಮಿಶ್ರಿತ ನೀರು ತುಂಬಿಕೊಂಡಿದ್ದು ಅದೇ ನೀರು ಪೂರೈಕೆಯಾಗುತ್ತಿದೆ.

  

ಮಂಗಳೂರಿನದ ಕೊಟ್ಟಾರ, ಕೊಡಿಕಲ್,ಹಾಗೂ ಕಾವೂರು ಪರಿಸರದಲ್ಲಿ ಇನ್ನೂ ಕೆಂಬಣ್ಣದ ನೀರು ಬರುವುದರಿಂದ ಜನತೆ ಆತಂಕಕ್ಕೊಳಗಾಗಿದ್ದಾರೆ ಹೀಗಾಗಿ ಈ ನೀರನ್ನು ಕುಡಿಯಲು, ಸ್ನಾನ ಮಾಡಲು, ಬಟ್ಟೆ ಒಗೆಯಲು ಮತ್ತು ದಿನ ನಿತ್ಯದ ಬಳಕೆಗೆ ಯೋಗ್ಯವಾಗಿಲ್ಲದಂತಾಗಿದೆ.ನಗರದ ನಿವಾಸಿಗಳಿಗೆ ಶುದ್ದಿಕರಣದ ಮೂಲಕವೇ ನೀರು ಪೂರೈಕೆಮಾಡಲಾಗುತ್ತಿದೆ ಆದರೆ ಕೆಲವೆಡೆ ಪೈಪ್ ಒಡೆದಿರುವುದರಿಂದ ಮಳೆ ನೀರು ಸೇರಿ ಕೆಂಪು ಮಿಶ್ರಿತವಾಗುತ್ತಿದೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ನೀರು ಸರಬರಾಜು ಅಧಿಕಾರಿ ಪದ್ಮನಾಭ ಉಳ್ಳಾಲ ತಿಳಿಸಿದರು.ಮೊದಲ ಮಳೆಯಾದ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದೆ ನೀರಿಗೆ ಕ್ಲೋರಿನೇಶನ್ ಮಾಡಲಾಗಿದೆ ನಗರಕ್ಕೆ ಶುದ್ಧ ನೀರೇ ಪೂರೈಕೆ ಮಾಡಲಾಗುತ್ತಿದೆ ಬಳಸಲು ಯಾವುದೇ ಆತಂಕ ಬೇಡ. ಕುದಿಸಿ ಆರಿಸಿ ಬಳಸಿದರೆ ಉತ್ತಮ ಎಂದು ಪಾಲಿಕೆ ಕಮಿಷನರ್ ಮಹಮ್ಮದ್ ನಝೀರ್ ಸಲಹೆ ನೀಡಿದರು.
ಮಂಗಳೂರಿನ ಜನತೆಗೆ ಮಳೆಯಿಂದಾಗಿ ಕುಡಿಯುವ ನೀರಿಗೂ ಕೂಡ ಸಮಸ್ಯೆ ಉಂಟಾಗಿದೆ. ಆದರೂ ಮಹಾ ನಗರ ಪಾಲಿಕೆ ಅದೇ ನೀರನ್ನು ಪೂರೈಕೆಮಾಡುವುದರಿಂದ ಜನರು ರೋಗದ ಭೀತಿಯಲ್ಲಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವರೇ ಎಂದು ಕಾದು ನೋಡಬೇಕಾಗಿದೆ.

Related posts

Leave a Reply