Header Ads
Header Ads
Breaking News

ಬಯಲು ರಂಗ ಮಂದಿರ ಆವರಣಗೋಡೆ ಕುಸಿತ

 ಭಾರೀ ಮಳೆಯ ಹಿನ್ನಲೆಯಲ್ಲಿ ಬೀಡಿನ ಗುಡ್ಡೆಯ ಬಯಲು ರಂಗ ಮಂದಿರದ ಆವರಣ ಗೋಡೆಗೆ ಹಾನಿಯಾಗಿದೆ. ಸುಮಾರು ೧ಎಕ್ರೆ ಪ್ರದೇಶ ಹೊಂದಿರುವ ಬಯಲು ರಂಗ ಮಂದಿರದ ಆವರಣಗೋಡೆ ಕುಸಿದಿದ್ದು ಗೋಡೆಯ ಕಲ್ಲುಗಳು ರಸ್ತೆ ಪಾಲಾಗಿದೆ. ಸುಮಾರು100 ಮೀಟರ್ ನಷ್ಟು ಆವರಣಗೋಡೆಗೆ ಹಾನಿಯಾಗಿದ್ದು ಮಂದಿರದ ಒಳಗೆ ನೀರು ನಿಂತು ಗೋಡೆಗೆ ಹಾನಿ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಎರಡು ವರ್ಷಗಳಹಿಂದೆಯಷ್ಟೇ ಬಯಲು ರಂಗ ಮಂದಿರ ನಿರ್ಮಾಣವಾಗಿತ್ತು.

ರಂಗ ಮಂದಿರದ ಭದ್ರತೆ ಹಾಗೂ ಶುಚಿತದ ದೃಷ್ಟಿಯಿಂದ ಅವಾರಣಗೋಡೆ ನಿರ್ಮಾಣ ಮಾಡಲಾಗಿತ್ತು. ವಲಸೆ ಕಾರ್ಮಿಕರೇ ಜಾಸ್ತಿ ಇರುವ ಈ ಪ್ರದೇಶದಲ್ಲಿ ವಲಸೆ ಕಾರ್ಮಿಕರು ರಂಗ ಮಂಇರದಲ್ಲಿ ಮಲಗುವುದು, ಮದ್ಯಪಾನ ಸೇರಿದಂತೆ ಮಲ ಮೂತ್ರ ಮಾಡುತ್ತಿದ್ದರು. ಇದೀಗ ಆವರಣ ಗೋಡೆ ಕುಸಿದಿದ್ದರಿಂದ ಮತ್ತೆ ವಲಸೆ ಕಾರ್ಮಿಕರು ಮದ್ಯಪಾನಿಗಳು ರಂಗ ಮಂದಿರ ಆಕ್ರಮಿಸುವ ಭೀತಿ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ, ನಗರಸಭೆ ಕ್ರಮ ಕೈಗೊಳ್ಳಬೇಕಾಗಿದೆ.

Related posts

Leave a Reply