Header Ads
Breaking News

20ಸಾವಿರ ಮೌಲ್ಯದ 40 ಪಾರಿವಾಳಗಳ ಕಳ್ಳತನ : ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ವಿಟ್ಲ ಪೊಲೀಸರು

ಅಟೋರಿಕ್ಷಾದಲ್ಲಿ ಬಂದು ಸುಮಾರು 20ಸಾವಿರ ಮೌಲ್ಯದ 40 ಪಾರಿವಾಳಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ದೂರು ನೀಡಿದ 24 ಗಂಟೆಯಲ್ಲಿ ವಿಟ್ಲ ಪೊಲೀಸ್ರ ತಂಡ ಬೇಧಿಸುವಲ್ಲಿ ಯಶಸ್ವಿಯಾಗಿದೆ.
ದೇರಳಕಟ್ಟೆ ಪನೀರ್ ಮೂಲದ ಕುಂಪಳ ಚಿತ್ರಾಂಜಲಿ ನಗರ ನಿವಾಸಿ ಮಹಮ್ಮದ್ ನಾಸಿರ್ ಯಾನೆ ನಾಸಿರ್ ಯಾನೆ ಕರಡಿ ನಾಸಿರ್ (24), ಕಾವಲಕಟ್ಟೆ ಮೂಲದ ಪಾತ್ರತೋಟ ನಿವಾಸಿ ರಿಝ್ವಾನ್ (19), ಬೋಳಂತೂರು ಮೂಲದ ಅಮ್ಟೂರು ನಿವಾಸಿ, ಮಹಮ್ಮದ್ ಅಫೀಝ್ (18) ಬಂಧಿತ ಆರೋಪಿಗಳಾಗಿದ್ದಾರೆ. 

ಜ.2ರ ತಡ ರಾತ್ರಿ 1 ಗಂಟೆ ಸುಮಾರಿಗೆ ರಿಕ್ಷಾದಲ್ಲಿ ಮೂವರು ಮನೆಯಂಗಳಕ್ಕೆ ಆಗಮಿಸಿ ಪಾರಿವಾಳದ ಗೂಡಿನ ಬೀಗ ಮುರಿದು ಕಳ್ಳತನ ಮಾಡಿ ರಿಕ್ಷಾದಲ್ಲಿ ಪಲಾಯನ ಮಾಡಿದ್ದರು. ಲೈಟ್ ಬೆಳಕಿನಲ್ಲಿ ಮುಖವನ್ನು ಗಮನಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಿಕೊಡಬೇಕಾಗಿ ಬುಧವಾರ ವಿಟ್ಲ ಠಾಣೆಗೆ ಸುಲೈ ದೂರು ನೀಡಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ.

Related posts

Leave a Reply

Your email address will not be published. Required fields are marked *