Header Ads
Header Ads
Breaking News

2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ ಉಡುಪಿಯಲ್ಲಿ ಸಚಿವ ಪ್ರಮೋದ ಮಧ್ವರಾಜ್ ಘೋಷಣೆ

2016ನೇ ಸಾಲಿನ ಏಕಲವ್ಯ ಪ್ರಶಸ್ತಿ ಪ್ರಕಟ ಪ್ರಕಟಗೊಂಡಿದೆ. ಉಡುಪಿಯಲ್ಲಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಏಕಲವ್ಯ ಪ್ರಶಸ್ತಿಯನ್ನು ಪ್ರಕಟಿಸಿದರು.

ಹರ್ಷಿತ್ ಎಸ್ ( ಅಥ್ಲೆಟಿಕ್ಸ್)ರಾಜೇಶ್ ಪ್ರಕಾಶ್ ಉಪ್ಪಾರ್ ( ಬಾಸ್ಕೆಟ್ ಬಾಲ್)ಪೂರ್ವಿಷಾ ಎಸ್.ರಾಮ್ ( ಬ್ಯಾಡ್ಮಿಂಟನ್)ರೇಣುಕಾ ದಂಡಿನ್ ( ಸೈಕ್ಲಿಂಗ್)ಮಯೂರ್ ಡಿ ಭಾನು ( ಶೂಟಿಂಗ್)ಕಾರ್ತಿಕ್ ಎ ( ವಾಲಿಬಾಲ್)ಮಾಳವಿಕ ವಿಶ್ವನಾಥ್( ಈಜು)ಕೀರ್ತನಾ ಟಿ.ಕೆ ( ರೋಯಿಂಗ್)ಅಯ್ಯಪ್ಪ ಎಂ.ಬಿ.( ಹಾಕಿ)ಸುಕೇಶ್ ಹೆಗ್ಡೆ( ಕಬ್ಬಡ್ಡಿ)ಗುರುರಾಜ( ಭಾರ ಎತ್ತುವುದು)ಸಂದೀಪ್ ಬಿ ಕಾಟೆ( ಕುಸ್ತಿ)ರೇವತಿ ನಾಯಕ ಎಂ( ವಿಕಲ ಚೇತನ ಮಹಿಳಾ ಈಜುಪಟು) ಇವರು 2016ರ ಏಕಲವ್ಯ ಪ್ರಶಸ್ತಿ ವಿಜೇತರಾಗಿದ್ದಾರೆ.ಜೀವಮಾನದ ಸಾಧನೆಗಾಗಿ ವಿ.ಆರ್.ಬೀಡು ( ಅಥ್ಲೆಟಿಕ್ಸ್)ಎಂ.ಆರ್.ಮೋಹಿತೆ( ಈಜು) ಇವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ ಹೀಗಿದೆ:

ಸೈಯ್ಯದ್ ಫತೇಶಾವಲಿ ಹೆಚ್,ಬೇಪಾರಿ ( ಆಟ್ಯಾ ಪಾಟ್ಯ)ಯಶಸ್ವಿನಿ ಕೆ.ಜಿ ( ಬಾಲ್ ಬ್ಯಾಡ್ಮಿಂಟನ್)ಶೇಖರ್ ವಾಲಿ ( ಗುಂಡು ಎತ್ತುವುದು)ಯುವರಾಜ್ ಜೈನ್(ಕಂಬಳ)ಮುನ್ನೀರ್ ಭಾಷಾ( ಖೊ ಖೋ)ಸುಗುಣ ಸಾಗರ್ ಹೆಚ್ ವಡ್ರಾಳೆ( ಮಲ್ಲಕಂಬ)ಸಬಿಯಾ ಎಸ್(ಥ್ರೋ ಬಾಲ್)ಆತ್ಮಶ್ರೀ ಹೆಚ್ ಎಸ್(ಕುಸ್ತಿ)ಧನುಷ್ಬಾಬು (ರೋಲರ್ ಸ್ಕೇಟಿಂಗ್)ಏಕಲವ್ಯ ಪ್ರಶಸ್ತಿ ಎರಡು ಲಕ್ಷ ನಗದು ಬಹುಮಾನ ಸೇರಿದಂತೆ ಏಕಲವ್ಯನ ಕಂಚಿನ ಪ್ರತಿಮೆ ಹೊಂದಿರುತ್ತದೆ. ಜೀವಮಾನ ಪ್ರಶಸ್ತಿಯು 1.5 ಲಕ್ಷ ಬಹುಮಾನ ಹಾಗೂ ಪ್ರಶಸ್ತಿ ಫಲಕ ಮತ್ತು ಕ್ರೀಡಾ ರತ್ನ ಪ್ರಶಸ್ತಿಯು 1ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದ್ದು ಮಾರ್ಚ್ ೭ರಂದು ಬೆಂಗಳೂರಿನ ಗುರುನಾನಕ್ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಶಸ್ತಿಯನ್ನು ವಿತರಿಸಿದ್ದಾರೆ.

Related posts

Leave a Reply