Header Ads
Header Ads
Header Ads
Breaking News

2017-18ನೇ ಸಾಲಿನ ಕಂಬಳ ವೇಳಾಪಟ್ಟಿ ಬಿಡುಗಡೆ ಜಿಲ್ಲಾ ಕಂಬಳ ಸಮಿತಿ ಸಭೆ ಕಂಬಳ ಷರತುಗಳ ರಚನೆ

2017-18 ನೇ ಸಾಲಿನಲ್ಲಿ ನಡೆಯುವ ಕಂಬಳಗಳ ವೇಳಾಪಟ್ಟಿ ಹಾಗೂ ಗೊಂದಲರಹಿತವಾಗಿ ಕಂಬಳ ನಡೆಸಲು ಬೇಕಾದ ಷರತುಗಳ ಕುರಿತು ಸಮಾಜಮಂದಿರದಲ್ಲಿ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಾಯಿತು. ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಶಾಂತರಾಮ ಶೆಟ್ಟಿ ಬಾರ್ಕೂರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಕಂಬಳದ ನಿಯಮ ಪರಿಪಾಲನೆ, ಅಹಿಂಸಾತ್ಮಕ ಕಂಬಳ ನಡೆಯಲು ಕಂಬಳದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರ, ಕಂಬಳಾಭಿಮಾನಿಗಳ ಸಹಕಾರ ಅಗತ್ಯ. ಪರಸ್ಪರ ಗೌರವದಿಂದ ನಡೆದುಕೊಂಡರೆ ಗೊಂದಲಗಳಾಗುವುದನ್ನು ತಪ್ಪಿಸಬಹುದು. ನಿರಾತಂಕವಾಗಿ ಶಿಸ್ತುಬದ್ಧವಾಗಿ ಕಂಬಳ ನಡೆಯಲು ಕಾನೂನಿನಲ್ಲಿ ಯಾವುದೆಲ್ಲ ಅವಕಾಶವಿದೆಯೋ, ಅದನ್ನು ಮಾಡಲಾಗುವುದೆಂದು ಜನಪ್ರತಿನಿಧಿಗಳು ಕೂಡ ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಸಮಿತಿ ಗೌರವಾಧ್ಯಕ್ಷ ಭಾಸ್ಕರ ಕೋಟ್ಯಾನ್, ಕೋಶಾಧಿಕಾರಿ ಪಿ.ಆರ್ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀನಿವಾಸ ಕಾಮತ್ ಅತ್ತೂರು ಗುಂಡ್ಯಡ್ಕ , ಅನಿಲ್ ಶೆಟ್ಟಿ ಮಂಕುತೋಟಗುತ್ತು, ಬೆಳ್ಳಿಪಾಡಿ ಕೇಶವ ಭಂಡಾರಿ, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ತೀರ್ಪುಗಾರರ ಸಂಚಾಲಕ ಕುಕ್ಕುಂದೂರು ರವೀಂದ್ರ ಕುಮಾರ್, ಮೂಡಾ ಅಧ್ಯಕ್ಷ ಸುರೇಶ್ ಪ್ರಭು ಉಪಸ್ಥಿತರಿದ್ದರು.

ವರದಿ: ಪ್ರೇಮಶ್ರಿ ಮೂಡಬಿದರೆ

Related posts

Leave a Reply