Header Ads
Header Ads
Breaking News

2018ರ ಚುನಾವಣೆ ಫಲಿತಾಂಶ ನಮ್ಮ ಪರವಾಗಿರಲಿದೆ –  ಜಿ.ಎ ಬಾವಾ 

ಮುಂಬರುವ ಚುನಾವಣೆಯ ಫಲಿತಾಂಶ ನಮ್ಮ ಪರವಾಗಿ ಬರಲಿದೆ. ಮುಂದೆ ನಮ್ಮದೇ ಸರಕಾರ ಅಧಿಕಾರಕ್ಕೆ ಬರಲಿದೆ. ಕಳೆದ 5 ವರ್ಷಗಳಲ್ಲಿ ಸರಕಾರ ನುಡಿದಂತೆ ನಡೆದಿದೆ. ನಡೆದಂತೆ ನುಡಿದಿದೆ ಎಂದು ರಾಜ್ಯದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎ ಬಾವಾ ಹೇಳಿದರು.

ಅವರು ಕಾರ್ಕಳದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಹಸಿವು ಮುಕ್ತ ಕರ್ನಾಟಕ ನಮ್ಮ ಗುರಿಯಾಗಿತ್ತು. ಅದನ್ನು ಸಾಧಿಸಲಾಗಿದೆ. ಧ್ವನಿ ಇಲ್ಲದವರಿಗೆ ಧ್ವನಿಕೊಟ್ಟ ಬಡವರ ಪರವಾದ ಸರಕಾರ. ಸಿದ್ದರಾಮಯ್ಯ ನೇತೃತ್ವದ ಈ ಸರ್ಕಾರ ದಾಖಲೆಯ ಸಾಧನೆ ಮಾಡಿ ದೇಶದಲ್ಲಿಯೇ ಮೊದಲ ಸಾಲಿನಲ್ಲಿದೆ ಎಂದ ಅವರು, ಸಾಮಾಜಿಕ ಜಾಲಾತಾಣಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುವುದು, ಸುಳ್ಳು ಸುದ್ದಿಗಳನ್ನು ಹರಡುವುದು ಆಕ್ಷೇಪಾರ್ಹವಾಗಿದೆ ಎಂದು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಭರತ್ ಮುಂಡೋಡಿ, ಸುಧಾಕರ್ ಕೋಟ್ಯಾನ್,ನೀರೆ ಕೃಷ್ಣ ಶೆಟ್ಟಿ, ಮಂಜುನಾಥ ಪೂಜಾರಿ , ಸುಬಿತ್ ಎನ್. ಆರ್ ಹಾಜರಿದ್ದರು.
ವರದಿ: ಕೆ.ಎಂ. ಖಲೀಲ್ ಕಾರ್ಕಳ

Related posts

Leave a Reply