Header Ads
Header Ads
Breaking News

ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ನೆರೆ ವಿಕೋಪ ಸಂತ್ರಸ್ಥರಿಗೆ ಪರಿಹಾರ ವಿತರಣೆ

ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ನೆರೆ ವಿಕೋಪ ಸಂತ್ರಸ್ಥರಿಗೆ ಪರಿಹಾರ ವಿತರಣೆ
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೆರೆ ವಿಕೋಪದಿಂದ ಹಾನಿಗೊಳಗಾದ ಸಂತ್ರಸ್ತರಿಗೆ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪರಿಹಾರ ಧನದ ಚೆಕ್ ಅನ್ನು ಹಸ್ತಾಂತರಿಸಿದರು.ಅಳಪೆಯ ನಿವಾಸಿ ಬಶೀರ್ ಹಾಗೂ ಪಡಿಲ್‌ನ ನಿವಾಸಿ ವಿನಾಯಕ್ ಅವರಿಗೆ ಅಂದಾಜು ಮೊತ್ತ 70ಸಾವಿರದಷ್ಟು ಮೊತ್ತದ ಚೆಕ್ ಅನ್ನು ಶಾಸಕ ಡಿ ವೇದವ್ಯಾಸ ಕಾಮತ್ ಅವರು ನೀಡಿದರು.

ಬಳಿಕ ಮಾತನಾಡಿದ ಅವರು ಇತ್ತಿಚೆಗೆ ಸುರಿದ ಭಾರಿ ಮಳೆಯಿಂದ ಮಂಗಳೂರು ದಕ್ಷಿಣದ ಹಲವೆಡೆ ನಾಗರಿಕರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಅವರಿಗೆ ನೆರವಾಗುವುದು ನ್ನ ಕರ್ತವ್ಯ ಮತ್ತು ಬಾಕಿ ಉಳಿದಿರುವ ಸಂತ್ರಸ್ತರಿಗೆ ಪರಿಶೀಲಿಸಿ ಪರಿಹಾರ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ,ಆದಷ್ಟು ಬೇಗ ಪರಿಹಾರ ನೀಡುತ್ತೇನೆ ಎಂದು ಬರವಸೆ ನೀಡಿದರುಈ ಸಂದರ್ಭ ಬಿಜೆಪಿ ಮುಖಂಡರಾದ ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಸಂಜಯ್ ಪೈ ಮತ್ತು ಅಧಿಕಾರಿ ಸ್ಟೀಫನ್ ಉಪಸ್ಥಿತರಿದ್ದರು.

Related posts

Leave a Reply