Header Ads
Header Ads
Breaking News

24ನೇ ವರ್ಷದ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ಇನ್ವೆನಿಯೋ 2k19 : ಫಾದರ್ ಮುಲ್ಲರ್ ಡೆಸೀನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ಕಾರ್ಯಕ್ರಮ

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅವಿಭಾಜ್ಯ ಅಂಗವಾದ ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ವತ್ರೆಯ ವತಿಯಿಂದ ಅಕ್ಟೋಬರ್ 19 ಮತ್ತು 20ರಂದು 24ನೇ ವರ್ಷದ ರಾಷ್ಟೀಯ ಹೋಮಿಯೋಪಥಿ ಸಮ್ಮೇಳನ ಇನ್ವೆನಿಯೋ 2k19 ನಡೆಯಲಿದೆ ಎಂದು ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ವತ್ರೆಯ ಆಡಳಿತ ಅಧಿಕಾರಿ ರೆ.ಫಾ ರೋಶನ್ ಕ್ರಾಸ್ತಾ ಹೇಳಿದರು.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇನ್ವೆನಿಯೋ 2k19 ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಡೆಸೀನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ ನಡೆಯಲಿದ್ದು, ಈ ಸಮ್ಮೇಳನದ ವಿಷಯವು ಹೋಮಿಯೋಪಥಿ ಬಗ್ಗೆ ಹೆಚ್ಚಿನ ಜ್ಞಾನ, ಕೌಶಲ್ಯತೆ ಮತ್ತು ಸಂಶೋಧನೆಯು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸುಧಾರಣೆಯನ್ನು ಮಾಡಲು ಸಹಕಾರಿಯಾಗುತ್ತದೆ ಎಂದರು. ವಿವಿಧ ಹಿನ್ನಲೆಯ ಸಂಶೋಧಕರನ್ನು ಮತ್ತು ವೈದ್ಯರನ್ನು ಒಂದೆ ವೇದಿಕೆಗೆ ಕರೆಸಿಕೊಂಡು ಸಂಶೋಧನೆಯನ್ನು ಸಾಧನವಾಗಿ ಬಳಸಿಕೊಂಡು ಮುಂದುವರಿಯಲು ದಾರಿ ಮಾಡಿಕೊಡುವುದು ಈ ಸಮ್ಮೇಳನದ ಮೂಲ ಉದ್ದೇಶವಾಗಿದೆ ಎಂದರು.
ಇನ್ನೂ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸೆಂಟ್ರಲ್ ಕೌನ್ಸಿಲ್ ಆಪ್ ಹೋಮಿಯೋಪಥಿ ನವದೆಹಲಿಯ ಅಧ್ಷಕ್ಷರಾದ ನಾಡೋಜ ಡಾ.ಬಿ.ಟಿ ರುದ್ರೇಶ್ ಸೇರಿದಂತೆ ಆನೇಕ ಗಣ್ಯರು ಭಾಗವಹಿಸಲಿದ್ದರೆ ಎಂದರು.
ಈ ಸುದ್ದಿಗೋಷ್ಠಿಯಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ವತ್ರೆಯ ಪ್ರಾಂಶುಪಾಲರಾದ ಡಾ. ಶಿವಪ್ರಸಾದ್.ಕೆ, ರಾಷ್ಟೀಯ ಹೋಮಿಯೋಪಥಿ ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ.ಪಿ.ಜೆ ಕುರಿಯನ್, ಮಾಧ್ಯಮ ಸಮಿತಿಯ ಸದಸ್ಯರಾದ ಡಾ.ವಿವೇಕ್ ಶಕ್ತಿಧರನ್ ಉಪಸ್ಥಿತರಿದ್ದರಿದ್ದರು.

Related posts

Leave a Reply

Your email address will not be published. Required fields are marked *