Header Ads
Header Ads
Breaking News

25ನೇ ವರ್ಷದ ಮಿಲಾದ್ ಸಮಾವೇಶ:ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಘಟಕ ಹಾಗೂ ತಾಲೂಕು ಈದ್ ಮಿಲಾದ್ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳವಾರ ನಡೆಯುವ 2ನೇ ವರ್ಷ ಬೃಹತ್ ಈದ್ ಮಿಲಾದ್ ಸಮಾವೇಶದ ಅಂಗವಾಗಿ ಸರಕಾರಿ ಆಸ್ಪತ್ರೆಯ ಬಡ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮ ನಡೆಯಿತು.

ಆಸ್ಪತ್ರೆಯ ಸುಮಾರು 130 ಮಂದಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ದ.ಕ.ಜಿಲ್ಲಾ ಯುವಜನ ಪರಿಷತ್ ಸಂಚಾಲಕ ಖಾಸಿಂ ಹಾಜಿ ಮಿತ್ತೂರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಬಡ ರೋಗಿಗಳ ಆರೈಕೆ ವಿಚಾರಿಸಿ ಹಣ್ಣು ಹಂಪಲುಗಳ ವಿತರಣೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಯ ಏನೇ ಕುಂದು ಕೊರತೆಗಳಿದ್ದಲ್ಲಿ ಅದನ್ನು ಸರಿಪಡಿಸುವ ಪ್ರಯತ್ನ ನಮ್ಮ ಸಂಘಟನೆಯಿಂದ ನಡೆಯಲಿದೆ ಎಂದರು.

ಪುತ್ತೂರು ಈದ್ ಮಿಲಾದ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಮಾತನಾಡಿ, ಈದ್ ಮಿಲಾದ್ ಆಚರಣೆ ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಆಚರಣೆಯ ನೆನಪಿಗೋಸ್ಕರ ಬಡ ರೋಗಿಗಳ ಕಾಳಜಿಯೊಂದಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಗುತ್ತಿದೆ. ಈ ಮೂಲಕ ಸಮಾಜದಲ್ಲಿ ಸೌಹಾರ್ದ ವಾತಾವರಣ ನಿರ್ಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ದ.ಕ.ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಶರೀಫ್ ಸಾಲ್ಮರ, ಕೋಶಾಧಿಕಾರಿ ಶಾಕೀರ್ ಹಾಜಿ ಮಿತ್ತೂರು, ಈದ್ ಮಿಲಾದ್ ಸಮಿತಿ ಪ್ರಧಾನ ಕಾರ್ಯದರ್ಶಿ ನೌಶಾದ್ ಬೊಳ್ವಾರ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಜೈನುದ್ದೀನ್, ರಶೀದ್, ಸಮೀರ್, ಬಶೀರ್, ಅಜೀಶ್, ಸಲೀಂ ಮುಂತಾದವರು ಉಪಸ್ಥಿತರಿದ್ದರು.
ವರದಿ: ಅನೀಶ್ ಪುತ್ತೂರು

Related posts

Leave a Reply