Header Ads
Header Ads
Breaking News

250 ಅಂಗನವಾಡಿ ದತ್ತು ಸ್ವೀಕಾರ

2018-19 ನೇ ಸಾಲಿನ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ3181ರ ನೂತನ ಜಿಲ್ಲಾ ಗವರ್ನರ್ ರೋಟರಿ ರೋಹಿನಾಥ್ ಪಾದೆಯವರು ಮಾತನಾಡಿ, ಅಂಗನವಾಡಿಗಳನ್ನು ಉನ್ನತೀಕರಣಗೊಳಿಸುವ ಬಗ್ಗೆ ಆಶಾ ಸ್ಫೂರ್ತಿ ಎಂಬ ಯೋಜನೆಯ ಅನುಷ್ಟಾನದ ಆಶಯ ಹೊಂದಿದ್ದು, ಹಳೆಯ ಕಟ್ಟಡಗಳ ನವೀಕರಣ, ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹೀಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕನಿಷ್ಟ250 ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸುವ ಯೋಜನೆಯನ್ನು ರೂಪಿಸಿಕೊಡಿದ್ದು, ಇನ್ನು40 ಸದಸ್ಯರನ್ನೊಳಗೊಂಡ5 ಅಂಗನವಾಡಿಗಳನ್ನು,60 ಸದಸ್ಯರನ್ನೊಳಗೊಂಡ 8 ಅಂಗನವಾಡಿಗಳನ್ನು, ಹಾಗೂ 60ಕ್ಕಿಂತ ಹೆಚ್ಚಿನ ಸದಸ್ಯರನ್ನು ಹೊಂದಿದ ಕ್ಲಬ್12 ಅಂಗನವಾಡಿಗಳನ್ನು ದತ್ತು ಸ್ವೀಕರಿಸಬೇಕು ಎಂದು ಹೇಳಿದರು.

ಇನ್ನು ಜಿಲ್ಲಾ ಮಾಜಿ ಗವರ್ನರ್ ಕೆ. ಕೃಷ್ಣ ಶೆಟ್ಟಿ ಮಾತಾನಾಡಿ,2018-19 ನೇ ಸಾಲಿನ ರೋಟರಿ ಅಂತಾರಾಷ್ಟ್ರೀಯ ಜಿಲ್ಲೆ3181ರ ನೂತನ ಜಿಲ್ಲಾ ಗವರ್ನರ್‌ರಾಗಿ ರೋಟರಿ ರೋಹಿನಾಥ್ ಪಾದೆಯವರು ಆಯ್ಕೆಯಾದ ಹಿನ್ನಲೆಯಲ್ಲಿ ಅವರ ಪದಗ್ರಹಣ ಸಮಾರಂಭವು ಜೂನ್ 30ರಂದು ಸಂಜೆ ನಗರದ ಕುಲಶೇಖರ ಕೋರ್ಡೆಲ್ ಹಾಲ್‌ನಲ್ಲಿ ನಡೆಯಲಿರುವುದು ಎಂದು ಮಾಹಿತಿ ನೀಡಿದರು.ಈ ಸಂದರ್ಭ ಆಶಾ ಸ್ಪೂರ್ತಿ ಕೈಪಿಡಿಯನ್ನು ಬಿಡುಗಡೆಗೊಳಿಸಿದರು. ಈ ಸಂದರ್ಭ ರೋಟರಿ ಜಿಲ್ಲಾ ಕಾರ್ಯದರ್ಶಿ ವಿಕ್ರಮದತ್ತ ಉಪಸ್ಥಿತರಿದ್ದರು.

Related posts

Leave a Reply