Header Ads
Header Ads
Breaking News

ಮಂಗಳೂರಿನಲ್ಲಿ ಕೈಗಾರಿಕಾ ನೀತಿ, ಸುಲಭ ವಹಿವಾಟು ಜಾಗೃತ ಕಾರ್ಯಕ್ರಮ

ಪ್ರಮುಖ ಕೈಗಾರಿಕಾ ಪ್ರದೇಶ ಬೈಕಂಪಾಡಿ ಕೈಗಾರಿಕಾ ನಗರವಾಗಿ ರೂಪಿಸುವ ಅಗತ್ಯವಿದ್ದು, ಇಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಕೈಗಾರಿಕೆಗಳಿಗಾಗಿ ಅಧಿಕ ಭೂಮಿ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಅಧ್ಯಕ್ಷ ಬಸವರಾಜ್ ಎಸ್. ಜವಳಿ ಹೇಳಿದರು.

 

ಅವರು ನಗರದ ಹೊಟೇಲ್‌ನಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ವತಿಯಿಂದ ಕೈಗಾರಿಕಾ ನೀತಿ ಹಾಗೂ ಸುಲಭ ವಾಣಿಜ್ಯ ವಹಿವಾಟು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯ ಇತರ ಸ್ಥಳಗಳಲ್ಲಿ ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ಕೆಐಎಡಿಬಿ ಪರಾಮರ್ಶೆ ನಡೆಸಬೇಕು. ಎಸ್‌ಎಂಇಗಳಿಗೆ ಸೌಲಭ್ಯ ಕಲ್ಪಿಸಲು ಬಹು ಹಂತದ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಬೇಕು. ಪಣಂಬೂರಿನಲ್ಲಿ ಬಂದರು ಸೌಲಭ್ಯವಿದ್ದು, ಒಳನಾಡು ಮತ್ತು ರಾಜ್ಯದ ಉಳಿದ ಭಾಗಗಳನ್ನು ಸಂಪರ್ಕಿಸುವ ದೃಷ್ಠಿಯೊಂದಿಗೆ ಪ್ರಮುಖ ಬಂದರಿನ ಸೌಲಭ್ಯ ಉಪಯೋಗಿಸಿಕೊಳ್ಳಲು ಲಾಜಿಸ್ಟಿಕ್ ಪಾರ್ಕ್ ಅಭಿವೃದ್ಧಿಪಡಿಸಬಹುದು ಎಂದು ಹೇಳಿದರು.
ಈ ಸಂದರ್ಭ ಕಾಸಿಯಾ ಉಪಾಧ್ಯಕ್ಷ ಆರ್. ರಾಜು, ಪ್ರಧಾನ ಕಾರ್ಯದರ್ಶಿ ರವಿಕಿರಣ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ಎಸ್. ವಿಶ್ವೇಶ್ವರಯ್ಯ, ಕೋಶಾಧಿಕಾರಿ ಶ್ರೀನಾಥ್ ಭಂಡಾರಿ, ಗೌರವ್ ಹೆಗ್ಡೆ ಉಪಸ್ಥಿತರಿದ್ದರು.

Related posts

Leave a Reply