Header Ads
Breaking News

3 ದಿನದ ಹಸುಳೆಗೆ ಅಪರೂಪದ ಹೃದಯ ಚಿಕಿತ್ಸೆ- ಎ.ಜೆ. ಆಸ್ಪತ್ರೆಯ ತಜ್ಞ ವೈದ್ಯರಿಂದ ಯಶಸ್ವಿ ಚಿಕಿತ್ಸೆ

 ಮಂಗಳೂರು: ಮಂಗಳೂರಿನ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆಯಲ್ಲಿ 3 ದಿನದ ಹಸುಳೆಗೆ ಅಪರೂಪದ ಹೃದಯ ಚಿಕಿತ್ಸೆ ಯಶಸ್ವಿಯಾಗಿ ನಡೆಸುವಲ್ಲಿ ಎಜೆ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ.

3 ದಿನದ ಮಗು ತುಟಿ ಮತ್ತು ಬೆರಳ ತುದಿಗಳು ನೀಲಿಬಣ್ಣಕ್ಕೆ ತಿರುಗುವುದು. ಕಡಿಮೆ ಹಾಲು, ಆಹಾರ ಸೇವನೆ ಮತ್ತು ಲವಲವಿಕೆ ಇಲ್ಲದಿರುವುದು ಈ ಸಮಸ್ಯೆಗಳಿಗಾಗಿ ಎ.ಜೆ ಆಸ್ಪತ್ರಗೆ ಕರೆತರಲಾಗಿತ್ತು. ಮಗುವನ್ನು ಎಜೆ ಆಸ್ಪತ್ರೆಯ ಮಕ್ಕಳ ಹೃದ್ರೋಗ ತಜ್ಞ ಡಾ. ಪ್ರೇಮ್ ಆಳ್ವರವರು ಪರೀಕ್ಷಿಸಿದಾಗ ಮಗುವಿಗೆ ಆಮ್ಲಜಕನ ಮಟ್ಟ ಕಡಿಮೆ ಅಂದರೆ ಶೇ.58 ಹಾಗೂ ಹೃದಯ ಎದೆಯ ಬಲಭಾಗದಲ್ಲಿ ಇರುವುದನ್ನು ಮತ್ತು ಹೃದಯದಲ್ಲಿ ದೊಡ್ಡ ರಂಧ್ರವಿರುವುದನ್ನು ಪತ್ತೆ ಹಚ್ಚಲಾಯಿತು. ಹೃದಯದಿಂದ ಶ್ವಾಸಕೋಶಕ್ಕೆ ಸಂಪರ್ಕಿಸುವ ರಕ್ತನಾಳವು ಸಂಪೂರ್ಣವಾಗಿ ಮುಚ್ಚಲ್ಪಟ್ಟಯ ಪಲ್ಮನರಿ ಅಟ್ರೆಸಿಯಾದಿಂದ ಮಗು ಬಳಲುತ್ತಿತ್ತು.

ಮಗುವನ್ನು ನವಜಾತ ತೀವ್ರ ನಿಗಾ ಘಟಕಕ್ಕೆ ಸೇರಿಸಿ ಸ್ಥಿರಗೊಳಿಸಿದ ನಂತರ ಮಕ್ಕಳ ಹೃದ್ರೋಗ ತಜ್ಞ ಡಾ. ಪ್ರೇಮ್ ಆಳ್ವರ ನೇತೃತ್ವದಲ್ಲಿ ಮೊದಲ ಹಂತದ ಚಿಕಿತ್ಸೆ ಪಿನ್ ಹೋಲ್ ಸರ್ಜರಿಯನ್ನು ಕ್ಯಾಥ್ಲ್ಯಾಬ್ ನಲ್ಲಿ ಮಾಡಲಾಯಿತು. ಕಾಲಿನ ರಕ್ತನಾಳದ ಮೂಲಕ ಮಗುವಿನ ಶ್ವಾಸಕೋಶದ ರಕ್ತನಾಳಕ್ಕೆ ಕ್ಯಾಥೆಟರನ್ನು ಹಾಯಿಸಿ ಪಿಡಿಎ ಸ್ಟೆಂಟಿಂಗ್ ಮಾಡಲಾಯಿತು. ಚಿಕಿತ್ಸೆಯ ಸಮಯದಲ್ಲಿ ಹೃದಯ ಅರಿವಳಿಕೆ ಬಹಳ ನಿರ್ಣಾಯಕವಾಗಿತ್ತು ಮತ್ತು ಇದರನ್ನು ಡಾ. ಗುರುರಾಜ್ ತಂತ್ರಿ ಮತ್ತು ಡಾ. ಸುಹಾಸ್ ನಿರ್ವಹಿಸಿದರು. ಚಿಕಿತ್ಸಾ ನಂತರ ಒಂದು ವಾರದಲ್ಲಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು. ಹೆಚ್ಚಿನ ಮಾಹಿತಿಗಾಗಿ ಡಾ. ಪ್ರೇಮ್ ಅಳ್ವ ದೂರವಾಣಿ ಸಂಖ್ಯೆ 9611125844 ಸಂಪರ್ಕಿಸಬಹುದು.

ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮಕ್ಕಳ ಹೃದ್ರೋಗ ವಿಭಾಗವು ಪರಿಣತ ಮಕ್ಕಳ ಹೃದ್ರೋಗ ತಜ್ಞರನ್ನು ಒಳಗೊಂಡಿದೆ. ಸರಳವಾದ ಹೃದ್ರೋಗ ದೋಷಗಳನ್ನು ಪಿನ್ ಹೋಲ್ ವಿಧಾನದಿಂದಲೂ ಕ್ಲಿಷ್ಟಕರದ ಹೃದ್ರೋಗ ದೋಷಗಳನ್ನು ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸುವುದು ಎಜೆ ಆಸ್ಪತ್ರೆಯಲ್ಲಿ ನಿರಂತರವಾಗಿ ನಡೆಯುತ್ತದೆ.

 

Related posts

Leave a Reply

Your email address will not be published. Required fields are marked *