Header Ads
Header Ads
Breaking News

ಮಲ್ಪೆ ಮೀನುಗಾರಿಕೆಗೆ ತೆರಳಿದ ಬೋಟ್ ನಾಪತ್ತೆ ಪ್ರಕರಣ: ರಾಹುಲ್ ಗಾಂಧಿಯವರ ಗಮನ ಸೆಳೆದ ಮಿನುಗಾರರು

ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಏಳು ಮಿನುಗಾರರು ಮತ್ತು ಸುವರ್ಣ ತ್ರಿಭುಜ ಬೋಟ್ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ಕುರಿತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೀನುಗಾರರ ಕಾಂಗ್ರೆಸ್ ಸಮಿತಿಯ ವತಿಯಿಂದ ಪಾರ್ಲಿಮೆಂಟ್‌ನಲ್ಲಿ ಚರ್ಚೆಯಾಗಿದೆ. ಕೇರಳದ ತರಿಯಾಪುರದಲ್ಲಿ ನಡೆದ ಸಂವಾದದಲ್ಲಿ ರಾಷ್ಟ್ರೀಯ ಫಿಶರ್‌ಮೆನ್ ಕಾಂಗ್ರೆಸ್ ಕಾರ್ಯದರ್ಶಿ ಉಡುಪಿಯ ಕಿರಣ್ ಕುಮಾರ್ ವಿಷಯ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಗಮನಕ್ಕೆ ಈ ವಿಚಾರವನ್ನು ತಂದಿದ್ದಾರೆ. ಮೀನುಗಾರರು ನಾಪತ್ತೆಯಾಗಿ 89 ದಿನಗಳು ಕಳೆದರೂ ಇನ್ನೂ ಪತ್ತೆಯಾಗಿಲ್ಲ ಎಂದು ಆರೋಪಿಸಿದರು. ಮೀನುಗಾರ ಕುಟುಂಬ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ ಎಂದು ರಾಹುಲ್ ಗಾಂಧಿ ಗಮನ ಸೆಳೆದರು.

ಇದಕ್ಕೆ ಉತ್ತರಿಸಿರ ರಾಹುಲ್ ಗಾಂಧಿ, ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ಹುಡುಕಾಟ ತೀವ್ರಗೊಳಿಸುವಂತೆ ಒತ್ತಾಯಿಸುತ್ತೇನೆ. ಪ್ರಧಾನಿ ಮೋದಿಯವರಿಗೆ ಮೀನುಗಾರರ ಮತ್ತು ರೈತರ ಕುರಿತು ಯಾವುದೇ ಕಾಳಜಿ ಇಲ್ಲ. ಅವರು ಪ್ರಥಮ ಆದ್ಯತೆ ಅಂಬಾನಿ, ನೀರವ್ ಮೋದಿ, ಅದಾನಿ ಅವರ ಮೇಲಿದೆ. ಕಾಂಗ್ರೆಸ್ ಜನ ಸಾಮಾನ್ಯರಿಗೆ ಮೊದಲ ಆದ್ಯತೆ ನೀಡಲಿದೆ ಎಂದರು.

Related posts

Leave a Reply

Your email address will not be published. Required fields are marked *