Header Ads
Header Ads
Breaking News

ಜನಾರ್ದನ ಪೂಜಾರಿ ವಿರುದ್ಧ ಕಿಡಿಕಾರಿದ ಜೆಡಿಎಸ್!: ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತೇ

ಚುನಾವಣೆಯ ಹೊಸ್ತಿಲಲ್ಲಿರುವಾಗ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಪತ್ರಿಕಾಗೋಷ್ಠಿ ನಡೆಸಿ, ಮೋದಿಯವರೇ ಪ್ರಧಾನಿಯಾಗಬೇಕು ಎಂದು ಹೇಳುವುದು ಮತ್ತು ಕಾಂಗ್ರೆಸ್‌ನವರನ್ನೇ ದೂರಿ ಗೊಂದಲ ಸೃಷ್ಟಿ ಮಾಡ್ತಾ ಇದ್ದಾರೆ. ಹಾಗಾಗಿ ಅವರ ವಿರುದ್ಧ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ವಿಟ್ಲ ಆಗ್ರಹಿಸಿದ್ದಾರೆ.

ಸುಳ್ಯದಲ್ಲಿ ಪಕ್ಷದ ನೂತನ ಕಚೇರಿ ಉದ್ಘಾಟನೆಗೆ ಬಂದಿದ್ದ ಅವರು, ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ಜನಾರ್ದನ ಪೂಜಾರಿಯವರು ಪ್ರಧಾನಿಯಾಗಿ ನರೇಂದ್ರ ಮೋದಿಯವರೇ ಪುನರಾಯ್ಕೆಯಾಗಬೇಕು ಎಂದು ಹೇಳುತ್ತಾ. ಕಾಂಗ್ರೆಸ್‌ನಿಂದ ತನಗೆ ಟಿಕೆಟ್ ಸಿಗಬೇಕೆಂದು ಕೇಳುವುದಾಗಿ ಹೇಳುತ್ತಿದ್ದಾರೆ. ಮಾತ್ರವಲ್ಲದೆ ಕಾಂಗ್ರೆಸ್‌ನ ನಾಯಕರಾದ ಸಿದ್ಧರಾಮಯ್ಯರನ್ನು ದೂರುತ್ತಾರೆ. ಪೂಜಾರಿಯವರು ಈ ರೀತಿ ಮಾಡುತ್ತಿರುವುದಕ್ಕೆ ಅರ್ಥವಿಲ್ಲ. ಈ ರೀತಿಯ ಗೊಂದಲ ಸೃಷ್ಟಿ ಮಾಡುತ್ತಿರುವ ಪೂಜಾರಿಯವರ ಮೇಲೆ ಪಕ್ಷದವರು ಶಿಸ್ತು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ, ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿ ದೇಶದ ಸಂವಿಧಾನ ಸುರಕ್ಷಿತವಾಗಿಲ್ಲ. ನಾವು ಸಂವಿಧಾನವನ್ನು ಬದಲಿಸಲೇ ಬಂದಿರುವವರು ಎಂದು ಮೋದಿ ಸರಕಾರದಲ್ಲಿ ಮಂತ್ರಿಯಾಗಿರುವ ವ್ಯಕ್ತಿಯೇ ಬಹಿರಂಗವಾಗಿ ಹೇಳುತ್ತಾರೆ. ಸಂವಿಧಾನದಿಂದ ಮಾತ್ರ ದೇಶದ ಆಡಳಿತ ಸಾಧ್ಯವಿಲ್ಲ ಎಂದು ಆರೆಸ್ಸೆಸ್ ನಾಯಕರು ಹೇಳುತ್ತಾರೆ. ಭಾರತ ದೇಶ ವಾಸಿಗಳಿಗೆ ಸಮಾನತೆಯ ಬದುಕುವ ಹಕ್ಕನ್ನು ರಕ್ಷಣೆಯನ್ನೂ ನೀಡಿರುವಂತಹ ಸಂವಿಧಾನದ ವಿರುದ್ಧವಾಗಿ ಚಿಂತಿಸುವ ಸಂಘಟನೆಗಳಿಗೆ ಸೇರಿದವರು ಆಡಳಿತ ನಡೆಸಿದರೆ ಜನಜೀವನ ದುರ್ಭರವಾಗಲಿದೆ ಎಂದು ಹೇಳಿದ್ರು..

ಈ ಸಂದರ್ಭ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ, ಸುಳ್ಯ ತಾಲೂಕು ಘಟಕದ ಅಧ್ಯಕ್ಷ ದಯಾಕರ ಆಳ್ವ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಜಿಲ್ಲಾ ಮಹಿಳಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಪ್ರೇಮಾನಂದ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *