Header Ads
Breaking News

ಮಿಥುನ್ ರೈಗೆ ಟಿಕೆಟ್ ಸಿಗಲು ಕಾರಣ ಬಿಜೆಪಿ ಶಾಸಕರು: ಮಿಥುನ್ ಟಿಕೆಟ್ ಹಿಂದಿನ ಅಸಲಿ ಕಥೆಯೇನು?

2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಯುವಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ ಅವರು ಕಣಕ್ಕಿಳಿದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸಾಕಷ್ಟು ಆಕಾಂಕ್ಷಿಗಳ ನಡುವೆ ಮಿಥುನ್ ರೈ ಅವರಿಗೆ ಟಿಕೆಟ್ ಲಭಿಸಿರುವ ಹಿಂದೆ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರ ಇನ್‌ಫ್ಲೂಯೆನ್ಸ್ ಇರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಮಿಥುನ್ ರೈಗೆ ಟಿಕೆಟ್ ಸಿಗಲು ಕಾರಣ ದ.ಕ. ಜಿಲ್ಲೆಯ ಇಬ್ಬರು ಯುವ ಬಿಜೆಪಿ ಶಾಸಕರು. ಅದು ಹೇಗೆ ಅಂತಾ ಕೇಳೋದಾದರೆ ಈ ರಿಪೋರ್ಟ್ ನೋಡಿ.

ದ.ಕ. ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯುವಲ್ಲಿ ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ಅವರು ಯಶಸ್ವಿಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಭ್ಯರ್ಥಿಗಳ ಆಕಾಂಕ್ಷಿಗಳ ರೇಸ್‌ನಲ್ಲಿದ್ದ ಘಟಾನುಘಟಿ ನಾಯಕರಾದ ಮಾಜಿ ಸಚಿವ ರಮಾನಾಥ್ ರೈ, ಬಿ.ಕೆ. ಹರಿಪ್ರಸಾದ್, ವಿನಯ್ ಕುಮಾರ್ ಸೊರಕೆ, ಐವನ್ ಡಿಸೋಜ, ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಹಿಂದಿಕ್ಕಿ ಟಿಕೆಟ್ ಪಡೆದುಕೊಂಡು ಮಿಥುನ್ ರೈ ಎಲ್ಲರ ಮೂಗಿನ ಮೇಲೆ ಬೆರಳೇರುವಂತೆ ಮಾಡಿದ್ದರು. ಮಿಥುನ್ ರೈಗೆ ಟಿಕೆಟ್ ಲಭಿಸುವ ಹಿಂದೆ ಕಾಂಗ್ರೆಸ್‌ನ ಟ್ರಬಲ್‌ಶೂಟರ್ ಸಚಿವ ಡಿ.ಕೆ. ಶಿವಕುಮಾರ್ ಅವರ ಕೈವಾಡವಿರುವುದು ಸ್ಪಷ್ಟವಾಗಿತ್ತು. ಆದರೆ ಮಿಥುನ್ ರೈ ಅವರಿಗೆ ಟಿಕೆಟ್ ಲಭಿಸಲು ಕಾರಣ ಕರಾವಳಿಯ ಇಬ್ಬರು ಬಿಜೆಪಿ ಶಾಸಕರು ಎನ್ನುವುದು ಬಹುತೇಕರಿಗೆ ತಿಳಿಯದ ವಿಚಾರ.

ಹೌದು, ಬಿಜೆಪಿ ಶಾಸಕ ಹರೀಶ್ ಪೂಂಜಾ,ಭರತ್ ಶೆಟ್ಟಿ ಫೋಟೋ ತೋರಿಸಿ ಮಿಥುನ್ ರೈ ಸೀಟು ಪಡೆದಿದ್ದಾರೆ ಎನ್ನುವುದು ನಂಬಲು ಕಷ್ಟವಾದರೂ ನಂಬಲೇಬೇಕಾದ ಸತ್ಯ. ತನ್ನ ಆಪ್ತ ಮಿಥುನ್ ರೈಗೆ ಟಿಕೆಟ್ ಕೊಡಿಸಲು ಸಾಕಷ್ಟು ಶ್ರಮಪಟ್ಟ ಡಿಕೆ ಶಿವಕುಮಾರ್, ಯುವ ನಾಯಕನಿಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಶಾಸಕರಾದ ವೈ ಭರತ್ ಶೆಟ್ಟಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಫೋಟೋಗಳನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ತೋರಿಸಿದ್ದರಂತೆ. ಬಿಜೆಪಿಯಲ್ಲಿ ಯುವಕರು ಚುನಾವಣೆ ನಿಂತು ಗೆದ್ದಿದ್ದಾರೆ. ಕಾಂಗ್ರೆಸ್ ನಲ್ಲೂ ಈ ಬಾರಿ ಯುವನಾಯಕನಿಗೆ ಸೀಟು ಕೊಡಬೇಕು ಎಂದು ತಾನೇ ಖುದ್ದಾಗಿ ಡಿಕೆಶಿ ಫೋಟೋಗಳನ್ನು ತೋರಿಸಿದ್ದರು ಎನ್ನುವ ಮಾಹಿತಿ ಕಾಂಗ್ರೆಸ್ ಮೂಲಗಳಿಂದ ಲಭ್ಯವಾಗಿದೆ.

ಮಿಥುನ್ ರೈಗೆ ಟಿಕೆಟ್ ಲಭಿಸುವುದು ಅಷ್ಟೊಂದು ಸುಲಭವಿರಲಿಲ್ಲ. ಮಿಥುನ್ ರೈ ಆಯ್ಕೆಗೆ ಕಾಂಗ್ರೆಸ್‌ನ ಪ್ರಭಾವಿ ಮುಖಂಡರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಮಿಥುನ್ ರೈಗೆ ಟಿಕೆಟ್ ಕೊಡುವ ಬದಲು ರಮಾನಾಥ್ ರೈಗೆ ಕೊಡಬೇಕೆನ್ನುವ ಒತ್ತಾಯ ಕೇಳಿಬಂದಿತ್ತು. ಅತೃಪ್ತರ ಅಸಮಾಧಾನದ ನಡುವೆಯೇ ತನ್ನ ಆಪ್ತನ ಪರ ಮಾಸ್ಟರ್‌ಸ್ಟ್ರೋಕ್ ಕೊಟ್ಟ ಡಿಕೆಶಿ ಬಿಜೆಪಿ ಯುವ ನಾಯಕರ ಸಾಧನೆಯ ವಿವರಣೆ ನೀಡಿ ರಾಹುಲ್ ಗಾಂಧಿಯವರ ಮನವೊಲಿಸಿದ್ದಾರೆ. ಈ ಮೂಲಕ ಮಿಥುನ್ ಮೊದಲ ಬಾರಿಗೆ ಲೋಕಸಭಾ ಕಣಕ್ಕಿಳಿಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಕಾಂಗ್ರೆಸ್‌ನ ಬಲ್ಲ ಮೂಲಗಳ ಮಾಹಿತಿ.

Related posts

Leave a Reply

Your email address will not be published. Required fields are marked *