Header Ads
Breaking News

32ವರ್ಷಗಳಿಂದ ಜಲಮರುಪೂರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ : ಜಲತಜ್ಞ ಡಾ. ಎನ್. ಜೆ. ದೇವರಾಜ್ ರೆಡ್ಡಿ

ವಾತಾವರಣದಲ್ಲಿನ ಏರುಪೇರಿನಿಂದಾಗಿ ಕಳೆದ ಎರಡು ದಶಕಗಳಿಂದ ರಾಜ್ಯದಲ್ಲಿ ಮಳೆಯ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿದ್ದು ಅಂತರ್ಜಲ ಬತ್ತಿದೆ. ಜೀವಜಗತ್ತಿನ ದಾಹ ನೀಗುವ ನೀರು ಮುಂದೊಂದು ದಿನ ಬರಿದಾಗಿಬಿಡಬಹುದೇ ಎನ್ನುವ ಆತಂಕ ಕಾಡುತ್ತಿದೆ. ಜನರು ನೀರಿನ ಬಗೆ ತೋರುತ್ತಿರುವ ನಿರ್ಲಕ್ಷ್ಯ, ಅತಿಯಾದ ಹಾಗೂ ಅನಾವಶ್ಯಕ ಬಳಕೆ, ಮಿತಿ ಮೀರಿದ ಕೊಳವೆ ಬಾವಿಗಳು ಅಂತರ್ಜಲವನ್ನು ಬರಿದು ಮಾಡಿದ್ದು ಸಾವಿರಾರು ಅಡಿ ಬೋರ್‍ವೆಲ್ ಕೊರೆದರೂ ಒಂದು ಹನಿ ನೀರು ಸಿಗದಂತಾಗಿದೆ. ನೀರಿನ ಕೊರತೆ ಹೆಚ್ಚುತ್ತಿರುವ ಇಂತಹ ಸ್ಥಿತಿಯಲ್ಲಿ ಜಾಗೃತರಾಗದಿದ್ದರೆ ಮುಂದೊಂದು ದಿನ ಹನಿ ನೀರಿಗಾಗಿ ಪರಿತಪಿಸುವ ದಿನಗಳು ದೂರವಿಲ್ಲ ಎಂದು ಚಿತ್ರದುರ್ಗದ ಜಲತಜ್ಞ ಡಾ. ಎನ್. ಜೆ. ದೇವರಾಜ್ ರೆಡ್ಡಿ ಹೇಳುತ್ತಿದ್ದಾರೆ.

ಕಳೆದ 32ವರ್ಷಗಳಿಂದ ಆಂತರ್ಜಲ ಸಂಶೋಧನೆ ಮಾಡುತ್ತಾ ಜಲಮರುಪೂರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರದುರ್ಗದ ಜಲತಜ್ಞ ಡಾ. ಎನ್. ಜೆ. ದೇವರಾಜ್ ರೆಡ್ಡಿ ಅವರು ಶುಕ್ರವಾರ ಮಂಗಳೂರಿನ ಪಾವೂರು ಬಳಿಯ ಕಿರಣ್ ಕುಮಾರ ಶೆಟ್ಟಿ ಅವರ ಕೃಷಿಭೂಮಿಗಾಗಿ ಕೊರೆದ ಬೋರ್‍ವೆಲ್ ಬತ್ತಿಹೋದ ಹಿನ್ನೆಲೆಯಲ್ಲಿ ಬೋರ್ ವೆಲ್ ರೀಚಾರ್ಜ್ ಕೆಲಸಕ್ಕೆಂದು ಬಂದವರು ಮಾತಿಗೆ ಸಿಕ್ಕಿದಾಗ ಹೇಳಿದ ಮಾತು ಇದು.

ಡಾ. ರೆಡ್ಡಿ ಅವರು ಚಿತ್ರದುರ್ಗದಲ್ಲಿ ಜಿಯೋ ರೈನ್ ವಾಟರ್ ಬೋರ್ಡ್ ಎಂಬ ಸಂಸ್ಥೆಯ ಆರಂಭಿಸುವ ಮೂಲಕ ಮೂರು ದಶಕದಲ್ಲಿ ಆಂತರ್ಜಲ ಸಂಶೋಧನೆ ಮೂಲಕ ಭೂ ವೈeನಿಕವಾಗಿ ಜಿಯೋ ಫಿಸಿಕಲ್ ಉಪಕರಣಗಳ ಮೂಲಕ ಅಂತರ್ಜಲ ಪತ್ತೆ ಹಚ್ಚುವ ಮೂಲಕ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 25ಸಾವಿರ ಕೊಳವೆ ಬಾವಿ ತೋಡಿಸಿ ಭೂಮಿಯ ಆಳದಲ್ಲಿರುವ ನೀರು ತೆಗೆಯುವ ಕೆಲಸ ಮಾಡಿದ್ದರು. 70-80ರ ದಶಕದಲ್ಲಿ ಕೊಳವೆ ಬಾವಿ ತೋಡಿದಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಿತ್ತು. ಕ್ರಮೇಣ ಅಂತರ್ಜಲ ಕುಸಿತವಾಗಿ ಮೂರು ಸಾವಿರ ಅಡಿ ಕೊರೆಯುವಂತಾಗಿದೆ. ಸಾಕಷ್ಟು ಕೊಳವೆ ಬಾವಿ ತೋಡಿದ ಪರಿಣಾಮ ಈಗ ನೀರಿಗಾಗಿ ಗಣಿಗಾರಿಕೆ ನಡೆಯುವಂತಾಗಿದೆ.

ದಕ್ಷಿಣ ಕನ್ನಡದಲ್ಲಿ ಕೊಳವೆ ಬಾವಿ ತೋಡಿದಾಗ 90ಶೇ. ವಿಫಲವಾಗಲು ಕಾರಣ ಅಂಜರ್ತಲ ಕುಸಿತ. ಇಲ್ಲಿನ ಭೂಮಿ ಕೊಳವೆ ಬಾವಿ ಹೇಳಿದ್ದಲ್ಲ. ಯಾಕೆಂದರೆ ಇತರ ಭಾಗದ ಭೂಮಿಯಂತೆ ಇಲ್ಲ. ಇಲ್ಲಿರುವುದು ಗ್ರಾನೆಟಿಕ್ ರಾಕ್. ಅದರಲ್ಲಿ ಟೊಳ್ಳು ಪದರ ವಲಯ ಇಲ್ಲ. ಹಾಗಾಗಿ ಮೂರು ಸಾವಿರ ಮಿ.ಮೀ. ಮಳೆ ಬಂದರೂ ಕೊಳವೆ ಬಾವಿ ತೋಡಿದಾಗ ನೀರು ಸಿಗದೆ ವಿಫಲವಾಗುತ್ತಿದೆ. ಕಲ್ಲಿನ ಸೀಳಿನಲ್ಲಿ ಸಂಗ್ರಹವಾಗಿರುವ ಅಂತರ್ಜಲ ತಕ್ಷಣ ಹೆಚ್ಚಿಸಲು ಕೊಳವೆಬಾವಿಗೆ ಜಲಮರುಪೂರಣ ಮಾಡುವುದೇ ಉಳಿದಿರುವ ದಾರಿ.

ನೀರನ್ನು ಮುಂದಿನ ಪೀಳಿಗೆಗೆ ಹಿಡಿದಿಡುವ ಮಹತ್ತರ ಕೆಲಸ ಆಗಬೇಕಿದ್ದು ಬತ್ತಿಹೋದ ಕೊಳವೆ ಬಾವಿಗಳಿಗೆ ಮತ್ತೆ ಜೀವ ತುಂಬಿಸುವ ಜಲ ಮರುಪೂರಣ ಮಾಡುತ್ತಿದ್ದು ಮಳೆನೀರನ್ನು ಸಂಗ್ರಹಿಸುವ ಮೂಲಕ ಭೂಮಿಯ ನೀರಿನ ಮಟ್ಟ ಹೆಚ್ಚಿಸುವ ತಂತ್ರವನ್ನು ಕಾರ್ಯರೂಪಕ್ಕೆ ತರುವಲ್ಲಿ ರೈತರೊಂದಿಗೆ ಸಹಕರಿಸುತ್ತಿದ್ದಾರೆ ಬತ್ತಿದ ಕೊಳವೆಬಾವಿಯಲ್ಲಿ ಗಂಗೆ ಉಕ್ಕಬೇಕು ಎಂಬುವುದು ಅವರ ಮಹದಾಸೆ.

Related posts

Leave a Reply

Your email address will not be published. Required fields are marked *