Header Ads
Header Ads
Breaking News

39ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ ಎಂ.ಶಿವಾನಂದ ಗಟ್ಟಿಯವರಿಗೆ ಬೀಳ್ಕೊಡುಗೆ ಸಮಾರಂಭ

ಹೌದು ಅಬಕಾರಿ ಇಲಾಖೆಯಲ್ಲಿ ಶ್ರದ್ಧೆ ಮತ್ತು ನಿಷ್ಠೆಯಿಂದ ಕಳೆದ 39ಸೇವೆ ಸಲ್ಲಿಸಿ ಎಲ್ಲಾ ಅಧಿಕಾರಿಗಳ ಮತ್ತು ಸಹದ್ಯೋಗಿಗಳ ಅಪಾರ ಪ್ರೀತಿಗೆ ಪಾತ್ರರಾದ ಎಂ.ಶಿವಾನಂದ ಗಟ್ಟಿಯವರ ಬಿಳ್ಕೊಡುಗೆ ಸಮಾರಂಭವು ಮಂಗಳೂರಿನ ಮೇರಿಹಿಲ್‌ನಲ್ಲಿರುವ ಅಬಕಾರಿ ಇಲಾಖೆಯ ಸಭಾಂಗಣದಲ್ಲಿ ನಡೆಯಿತು.

ಈ ವೇಳೆ ಎಲ್ಲಾ ಸಹದ್ಯೋಗಿಗಳು ಮತ್ತು ಅವರ ಹಿತೈಷಿಗಳು ಸಾಲು ಹೊದಿಸಿ ಮಾಲೆ ಮತ್ತು ಪೇಟದರಿಸಿ ಸನ್ಮಾನಿಸಿದರು. ಬಳಿಕ ಕೆಲವು ಸಹದ್ಯೋಗಿಗಳು ಮಾತನಾಡಿ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡು ರಾಜ್ಯಕ್ಕೆ ಹತ್ತಾರು ಈಜುಪಟುಗಳನ್ನು ತರಬೇತುಗೊಳಿಸಿದ ನೀಡಿದ ಶ್ರೇಷ್ಠ ಗುರು. ರಾಷ್ಟ್ರೀಯ ಮಟ್ಟದ ಈಜುಪಟು. ಮತ್ತು ಒಬ್ಬ ಉತ್ತಮ ಸಹೃದಯಿ. ಎಂ.ಶಿವಾನಂದ ಗಟ್ಟಿ ಇವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.

ಬಳಿಕ ಎಂ.ಶಿವಾನಂದ ಗಟ್ಟಿಯವರು ಮಾತನಾಡಿ ತನ್ನ ಅಧಿಕಾರ ಅವಧಿಯಲ್ಲಿ ಕಂಡ ಎಡರು ತೊಡರು.ಮತ್ತು ಸಾಗಿ ಬಂದ ದಾರಿಯನ್ನು ನೆನಪಿಸಿಕೊಂಡು ಭಾವುಕರಾದರು.

ಅಷ್ಟೇ ಅಲ್ಲದೇ ಇತ್ತೀಚೆಗೆ ಮೈಸೂರಿನಲ್ಲಿ ನೆಡೆದ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಇಲಾಖೆಯನ್ನು ಪ್ರತಿನಿಧಿಸಿದ ಇವರ ತಂಡದ ಮೂರು ಮಂದಿ ಚಾಂಪಿಯನ್ ಮತ್ತು ಶಿವಾನಂದ ಗಟ್ಟಿಯವರು ಸ್ವಿಮಿಂಗ್‌ನಲ್ಲಿ ತಲ ಒಂದೊಂದು ಚಿನ್ನ ಮತ್ತು ಬೆಳ್ಳಿ ಪದಕವನ್ನು ಬಾಚಿರುವುದು ಹೆಮ್ಮೆಯು ವಿಚಾರ.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತರಾದ ಶೈಲಜಾ ಕೋಟೆ, ಅಬಕಾರಿ ಉಪಾಧ್ಯಕ್ಷರುಗಳಾದ ಶಿವಪ್ರಸಾದ್, ವಿನೋದ್ ಕುಮಾರ್,ಪದ್ಮಾ, ಸೇರಿದಂತೆ ಇನ್ನಿತರ ಅಬಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply