Header Ads
Header Ads
Header Ads
Breaking News

46 ನೇ ವರ್ಷದ ಸುಳ್ಯ ದಸರಾಕ್ಕೆ ವೈಭವಯುತ ತೆರೆ ಸ್ತಬ್ಧಚಿತ್ರಗಳ ನಡುವೆ ಶ್ರೀದೇವಿಯ ಶೋಭಾಯಾತ್ರೆ

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ದಸರಾ ಉತ್ಸವ ಸಮಿತಿಯ ಆಶ್ರಯದಲ್ಲಿ ನಡೆದ 46 ನೇ ವರ್ಷದ ಸುಳ್ಯ ದಸರಾಕ್ಕೆ ವೈಭವಯುತ ತೆರೆ ಬಿದ್ದಿದೆ. ಸೆಪ್ಟಂಬರ್ 27 ರಂದು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರಂಭಗೊಂಡ ಶಾರದಾಂಬಾ ಉತ್ಸವ ಇಂದು ಶ್ರೀ ದೇವಿಯ ವೈಭವದ ಶೋಭಾಯಾತ್ರೆಯೊಂದಿಗೆ 9 ದಿನ ನಡೆದ ಸುಳ್ಯ ದಸರಾ ಮುಕ್ತಯಗೊಂಡಿತ್ತು. ಚೆನ್ನಕೇಶವ ದೇವಸ್ಥಾನದ ಎದುರು ಶಾಸಕ ಎಸ್. ಅಂಗಾರ ಶ್ರೀದೇವಿಯ ಶೋಭಾಯಾತ್ರೆಗೆ ಚಾಲನೆ ನೀಡಿದರು.

 

ಶ್ರೀ ದೇವಿಯ ಶೋಭಾಯಾತ್ರೆಯ ವಾಹನವನ್ನು ಈ ಬಾರಿ ಸುಳ್ಯದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಬಿ.ಸಿ.ರೋಡಿನ ಸುಕನ್ಯಾ ಎಂಬವರು ಚಲಾಯಿಸಿ ಗಮನ ಸೆಳೆದರು. ಜೊತೆಗೆ ವಿದ್ಯುತ್ ದೀಪಗಳಿಂದ ಕಂಗೋಳಿಸುವ ಚಲಿಸುವ ಸ್ತಬ್ಧ ಚಿತ್ರಗಳು, ಮಂಗಳೂರಿನ ಹುಲಿ ವೇಷ ತಂಡ, ಚಲಿಸುವ ಸಂಗೀತ ರಸಮಂಜರಿ, ಕಿವಿಗಪ್ಪಿಸುವ ನಾಸಿಕ್ ಬ್ಯಾಂಡ್‌ಗಳ ಅಬ್ಬರ, ಕೊಂಬು ವಾಲಗ, ವಿಶೇಷ ಸುಡುಮದ್ದುಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಶಾರಾದಾಂಬಾ ಕಲಾ ವೇದಿಕೆಯಿಂದ ಹೊರಟು ಸುಳ್ಯದ ಪ್ರಮುಖ ಬೀದಿಗಳಲ್ಲಿ ಸಾಗಿ ಶ್ರೀ ದೇವಿಯ ಮೂರ್ತಿಯನ್ನು ಪಯಸ್ವಿಸಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

ವರದಿ: ಪದ್ಮನಾಭ ಸುಳ್ಯ

Related posts

Leave a Reply