Header Ads
Header Ads
Header Ads
Breaking News

47 ಪುಟಾಣಿ ಮಕ್ಕಳಿಂದ ಡ್ರಾಮಾ ಪ್ರದರ್ಶನ

ಹಕುನ ಮಟಾಟ ಸಂಸ್ಥೆಯ ವತಿಯಿಂದ ಚಾರ್ಲಿ ಆಂಡ್ ದಿ ಚಾಕೋಲೆಟ್ ಫ್ಯಾಕ್ಟರಿ ಬ್ರಿಟಿಷ್ ಮಕ್ಕಳ ಕಥೆಯ ರೋಲ್ಡ್ ದಾಲ್ ಪುಸ್ತಕದ ಕಥೆಯನ್ನು ಆಯ್ಕೆ ಮಾಡಿ 47 ಮಕ್ಕಳಿಂದ ಡ್ರಾಮಾ ಪ್ರದರ್ಶನ ಕಾರ್ಯಕ್ರಮ ಕೊಡಿಯಾಲ್ ಬೈಲ್‌ನ ಕೆನರಾ ಬಾಲಕಿಯರ ಹೈಸ್ಕೂಲ್‌ನಲ್ಲಿ ನಡೆಯಿತು.

ಹಕುನ ಮಟಾಟ ಸಂಸ್ಥೆ ಒಂದು ಮಕ್ಕಳ ಶಾಲೆಯ ಅವಧಿಯ ನಂತರ ಮಕ್ಕಳು ಮನೋರಂಜನೆಯನ್ನು ಇತರ ಚಟುವಟಿಕೆಯನ್ನು ಮಾಡುವ ಸ್ಥಳವಾಗಿದೆ. ಈ ಸಂಸ್ಥೆ 2015 ಅಕ್ಟೋಬರ್ 1ರಂದು ಆರಂಭಗೊಂಡಿದ್ದು ಅಂಜನಾ ಕಾಮತ್ ರವರು ಈ ಸಂಸ್ಥೆಯನ್ನು ಮಕ್ಕಳಿಗಾಗಿಯೇ ಸ್ಥಾಪಿಸಿದ್ದಾರೆ.
ಇದೀಗ ಎರಡನೇ ಪ್ರದರ್ಶನ ಕೆನರಾ ಬಾಲಕಿಯರ ಹೈಸ್ಕೂಲ್‌ನ ಅಡಿಟೋರಿಯಂನಲ್ಲಿ ನಡೆಯಿತು. ಚಾರ್ಲಿ ಆಂಡ್ ದಿ ಚಾಕೋಲೆಟ್ ಫ್ಯಾಕ್ಟರಿ ಬ್ರಿಟಿಷ್ ಮಕ್ಕಳ ಕಥೆಯ ರೋಲ್ಡ್ ದಾಲ್ ಪುಸ್ತಕದ ಕಥೆಯನ್ನು ಆಯ್ಕೆ ಮಾಡಿ 47 ಮಕ್ಕಳಿಂದ ಡ್ರಾಮಾ ಪ್ರದರ್ಶಿಸಿದರು. ಇದಕ್ಕೆ ಭಾರತ್ ಬುಕ್‌ಮಾರ್ಕ ಪ್ರಾಯೋಜಕತ್ವ ನೀಡಿದ್ದು, ವಿ4 ನ್ಯೂಸ್ ಸಹಯೋಗದೊಂದಿಗೆ ನಡೆಯಿತು.

ಚಾರ್ಲಿ ಆಂಡ್ ದಿ ಚಾಕೋಲೆಟ್ ಫ್ಯಾಕ್ಟರಿ ಬ್ರಿಟಿಷ್ ಮಕ್ಕಳ ಕಥೆಯ ರೋಲ್ಡ್ ದಾಲ್ ಪುಸ್ತಕದ ಕಥೆಯನ್ನು ಆಯ್ಕೆ ಮಾಡಲಾಗಿದ್ದು ನೃತ್ಯವನ್ನು ಮಿಸ್ ರವೀನಾ, ಒಕಲ್ ತರಬೇತಿ ಆಶಾ ಡಿ ಸೋಜಾ ನೀಡಿದ್ದು, ಜಾಯ್ ರಸ್ವ್ಜೀನಾ ಮಕ್ಕಳಿಗೆ ಸಂಗೀತ ತರಬೇತಿಯನ್ನು ನೀಡಿದ್ದಾರೆ. ಈ ಕಥೆಯನ್ನು ರಜನಿ ಲೋಬೋ ಪತ್ರಾವೋ ನಿರ್ದೇಶಿಸಿದ್ದು, ಶರನ್ ಪಿಂಟೋ ನಿರ್ಮಾಣದಲ್ಲಿ ಡ್ರಾಮಾ ಮೂಡಿ ಬಂದಿದೆ.

ಹಕುನ ಮಟಾಟ ಸಂಸ್ಥೆಯಲ್ಲಿ 3ರಿಂ 12 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಕಲ್ಪಿಸಿದ್ದು ಅಂಜನಾ ಕಾಮತ್ ನರ್ಸರಿ ಟೀಚರ್ ಟ್ರೈನಿಂಗ್ ಮತ್ತು ಮಾಸ್ಟ್‌ರ್‍ಸ ಇನ್ ಚೈಲ್ಢ್ ಮೆಂಟಲ್ ಹೆಲ್ತ್ ಇವರಿಗೆ ಸಹಾಯಕರಾಗಿ ಗ್ಲೋರಿಯಾ ವೇಗಸ್, ನೇಹಾ ಖಾರೆ, ವಂದಿತ ಪೈ, ವಿನಯ್ ಡಿ ಸೋಜಾ, ಆಶಾ ಮಿನೇಜಸ್ ಜತೆಗಿದ್ದರು.
ವರದಿ: ಶರತ್

Related posts

Leave a Reply