Header Ads
Header Ads
Breaking News

48ನೇ ವರ್ಷದ ಸುಳ್ಯ ದಸರಾಕ್ಕೆ ವೈಭವಯುತ ತೆರೆ

ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಮತ್ತು ದಸರಾ ಉತ್ಸವ ಸಮಿತಿಯ ಆಶ್ರಯದಲ್ಲಿ 9 ದಿನಗಳ ಕಾಲ ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಬಾಗದಲ್ಲಿ ಪೂಜಿಸಲ್ಪಟ್ಟ ಶ್ರೀ ದೇವಿಯ ವೈಭವದ ಶೋಭಾಯಾತ್ರೆಯ ಸುಳ್ಯ ದಸರಾ ಸಂಪನ್ನಗೊಂಡಿತ್ತು.
ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿಯ ವತಿಯಿಂದ ನಡೆಯುವ 48ನೇ ವರ್ಷದ ಸುಳ್ಯ ದಸರಾ 2019 ಅ. 5ರಂದು ಶಾರದಾ ದೇವಿಯ ಪ್ರತಿಷ್ಠೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ದೇವಸ್ಥಾನದ ಎದುರಿನ ಶಾರದಾಂಬಾ ವೇದಿಕೆಯಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.
ದಸರಾ ಶೋಭಾಯತ್ರೆಗೆ ಸುಳ್ಯ ಶಾಸಕ ಎಸ್. ಅಂಗಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನ.ಪಂ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸಮಿತಿಯ ಗೌರವಾಧ್ಯಕ್ಷ ಗೋಕುಲ್‍ದಾಸ್, ಸಾರ್ವಜನಿಕ ಸಾರದಾಂಬಾ ಸೇವಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಜಿಲ್ಲಾ ಪಂಚಾಯತ್ ಇಲಾಖೆ, ಅರಣ್ಯ ಇಲಾಖೆ, ನ.ಪಂ. ಸುಳ್ಯ, ಲೋಕೋಪಯೋಗಿ ಇಲಾಖೆ, ಶಾಸಕರ ನೇತೃತ್ವದ ಬ್ರಹ್ಮ ಮೊಗೇರ್ಕಳ ದೈವಸ್ಥಾನ ದಾಸನಕಜೆ, ವೀರ ಕೇಸರಿ ವಿಷ್ಣುಸರ್ಕಲ್, ಹಾಗೂ ಮತ್ತಿತರರು ಸಂಘಟನೆಗಳ ವತಿಯಿಂದ ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.

ಮೆರವಣಿಗೆ ಜೊತೆಗೆ ವಿದ್ಯುತ್ ದೀಪಗಳಿಂದ ಕಂಗೋಳಿಸುವ ಚಲಿಸುವ ಸ್ತಬ್ಧ ಚಿತ್ರಗಳು, ಮಂಗಳೂರಿನ ಹುಲಿ ವೇಷ ತಂಡ, ಚಲಿಸುವ ಸಂಗೀತ ರಸಮಂಜರಿ, ಕಿವಿಗಪ್ಪಿಸುವ ನಾಸಿಕ್ ಬ್ಯಾಂಡ್‍ಗಳ ಅಬ್ಬರ, ಕೊಂಬು ವಾಲಗ, ವಿಶೇಷ ಸುಡುಮದ್ದುಗಳೊಂದಿಗೆ ಅದ್ದೂರಿ ಶೋಭಾಯಾತ್ರೆ ಶಾರಾದಾಂಬಾ ಕಲಾ ವೇದಿಕೆಯಿಂದ ಹೊರಟು ಸುಳ್ಯದ ಪ್ರಮುಖ ಬೀದಿಗಳಲ್ಲಿ ಸಾಗಿ ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜ್ ರಸ್ತೆ, ಜೂನಿಯರ್ ಕಾಲೇಜು ರಸ್ತೆಯಾಗಿ ಶ್ರೀರಾಂ ಪೇಟೆಯಾಗಿ, ಹಳೆಗೇಟಿಗೆ ಹೋಗಿ ಬಳಿಕ ಜಟ್ಟಿಪಳ್ಳ, ಬಾಳೆಮಕ್ಕಿಯಾಗಿ, ಗಾಂಧಿನಗರಕ್ಕೆ ಹೋಗಿ ಬಳಿಕ ಪಯಸ್ವಿನಿ ನದಿಯಲ್ಲಿ ಜಲಸ್ತಂಭನ ಮಾಡಲಾಯಿತು. ಶ್ರೀ ದೇವಿಯ ಮೂರ್ತಿಯನ್ನು ಪಯಸ್ವಿಸಿ ನದಿಯಲ್ಲಿ ಜಲಸ್ತಂಭನಗೊಳಿಸಲಾಯಿತು.

Related posts

Leave a Reply

Your email address will not be published. Required fields are marked *