Header Ads
Header Ads
Breaking News

48 ದಿನಗಳ ಕಾಲ ನಡೆದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಸಮಾರೋಪ ಕಾರ್ಯಕ್ರಮ

ವಿಟ್ಲದ ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಮೋಹನದಾಸ ಪರಮಹಂಸ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ 48 ದಿನಗಳ ಕಾಲ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಸಮಾರೋಪ ನಡೆಯಿತು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾಣಿಲದ ಪೂಜೆಯ ಫಲವಾಗಿ ವಿಟ್ಲ ಸೀಮೆಯಲ್ಲಿ ಭೀಕರ ಪ್ರಾಕೃತಿಕ ವಿಕೋಪ ನಡೆಯಲಿಲ್ಲ. ಪೂರ್ಣ ಮಂಡಲ ಕಾಲ ನಡೆದ ದೇವತಾ ಕಾರ್ಯದ ಫಲವಾಗಿ ಋಣಾತ್ಮಕ ಅಂಶಗಳು ದೂರವಾಗಿದೆ ಎಂದು ಹೇಳಿದರು.

ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ ಪ್ರಕೃತಿಯ ವಿರುದ್ಧವಾಗಿ ಹೋದಾಗ ವಿನಾಶ ನಿಶ್ವಿತವಾಗಿದ್ದು, ಪ್ರಕೃತಿಯನ್ನು ಸ್ವಾರ್ಥಕ್ಕಾಗಿ ಬಳಸುವುದು ನಿಲ್ಲಬೇಕು. ಸಾಧುಗಳು ಸಮಾಜಮುಖಿಯಾದಾಗ ಸಮಾಜೋದ್ಧಾರ ಕಾರ್ಯವಾಗುತ್ತದೆ ಎಂದು ತಿಳಿಸಿದರು.

ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀಧಾಮ ಕ್ಷೇತ್ರ ಪರಿಚಯದೊಂದಿಗೆ ಮಹಾಲಕ್ಷ್ಮೀ ಭಕ್ತಿ ಗೀತೆಗಳ ಕುಂಕುಮ ವಿಡಿಯೋ ಧ್ವನಿ ಸುರುಳಿ ಬಿಡುಗಡೆ ಗೊಳಿಸಿದರು. ಅಶೋಕ ಕುಮಾರ ರೈ ಅರ್ಪಿಣಿಗುತ್ತು ಅವರನ್ನು ಸನ್ಮಾನಿಸಲಾಯಿತು. ಗಣಪತಿ ಹೋಮ, ಶ್ರೀದೇವಿ ತ್ರಿಕಾಲ ಪೂಜೆ, ಶ್ರೀದುರ್ಗಾ ಹೋಮ, ಕನಕಾಧಾರಾ ಯಾಗ, ಲಕ್ಷ್ಮೀನಾರಾಯಣ ಹೃದಯ ಹೋಮ, ಸಾಮೂಹಿಕ ಕುಂಕುಮಾರ್ಚನೆ, ಶ್ರೀ ವರಮಹಾಲಕ್ಷ್ಮೀ ಪೂಜೆ, ಸಾಮೂಹಿಕ ವಾಯನ ದಾನ ಕಾರ್ಯಕ್ರಮಗಳು ನಡೆದವು.

ಪುತ್ತೂರು ಶಾಸಕ ಸಂಜೀವ ಮಠಂದೂರು, ಉದ್ಯಮಿಗಳಾದ ಕುಸುಮೋದರ ಡಿ. ಶೆಟ್ಟಿ, ಭಾಸ್ಕರ ಶೆಟ್ಟಿ ಪುಣೆ, ಅರವಿಂದ ರೈ ಪುಣೆ, ದಿಪಾ ಅರವಿಂದ ರೈ, ದಯಾನಂದ ಬಂಗೇರ ಮುಂಬಯಿ, ಪುರುಷೋತ್ತಮ ಚೆಂಡ್ಲ, ಉಮೇಶ್ ಬೆಂಗಳೂರು, ಮಹೇಶ್ ಮೂಲ್ಯ ಬೆಂಗಳೂರು, ಮಾಣಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಕುಮಾರ ಬಾಳೆಕಲ್ಲು, ಮುಂಬಯಿ ಶನಿಶ್ವರ ದೇವಸ್ಥಾನದ ಮೋಹನ, ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವಿಟ್ಲ ಯೋಜನಾಧಿಕಾರಿ ಮೋಹನ, ಕ್ಷೇತ್ರದ ಟ್ರಸ್ಟಿಗಳಾದ ಚಂದ್ರಶೇಖರ ತುಂಬೆ, ವನಿತಾ ವಿ. ಶೆಟ್ಟಿ, ಗೀತಾ ಚಂದ್ರಶೇಖರ್, ಕುಲಾಲ ಸಮಾಜದ ಅಧ್ಯಕ್ಷ ದೇವದಾಸ್ ಕುಲಾಲ್, ಟ್ರಸ್ಟಿ ಮಚ್ಚೇಂದ್ರನಾಥ ಸಾಲ್ಯಾನ್, ಟ್ರಸ್ಟಿ ತಾರಾನಾಥ ಕೊಟ್ಟಾರಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಟ್ರಸ್ಟಿ ಮಂಜು ವಿಟ್ಲ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *