Header Ads
Header Ads
Breaking News

60 ವರ್ಷಗಳಿಂದ ಡಾಮರು ಭಾಗ್ಯವನ್ನೇ ಕಂಡಿಲ್ಲ ಮಾರ್ನಮಿಕಟ್ಟೆ-ಜಪ್ಪಿನಮೊಗರು ರಸ್ತೆ

ಮಂಗಳೂರು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾದ್ರೂ ಏನೂ ಪ್ರಯೋಜನ ಹೇಳಿ, ಕೆಲವೊಂದು ರಸ್ತೆಗಳು ಮಾತ್ರ ಇನ್ನು ಕೂಡ ಅಭಿವೃದ್ಧಿ ಕಾಣ್ತಾ ಇಲ್ಲ, ಇಲ್ಲಿರುವ ರಸ್ತೆ 6ಂ ವರ್ಷಗಳಿಂದ ಡಾಂಬರು ಕಾಣದೇ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗ್ತಾ ಇದೆ. ಹಾಗಾದ್ರೆ ಆ ರಸ್ತೆ ಎಲ್ಲಿ ಇರುವುದು ಅಂತೀರಾ, ಇಲ್ಲಿದೇ ಸ್ಪೆಷಲ್ ರಿಪೋರ್ಟ್ಹೊಂಡ, ಗುಂಡಿಗಳಿರುವ ರಸ್ತೆ… ರಸ್ತೆಯಲ್ಲಿ ಡ್ಯಾನ್ಸ್ ಮಾಡ್ತಾ ಹೋಗುತ್ತಿರುವ ವಾಹನಗಳು. ರಸ್ತೆ ಮಧ್ಯೆಯೇ ಮಳೆ ನೀರು. ಇಷ್ಟೆಲ್ಲಾ ಸಮಸ್ಯೆಗಳ ಆಗರವಾಗಿರುವುದು ಮಂಗಳೂರಿನ ಮಾರ್ನಮಿಕಟ್ಟೆಯ ಬಳಿಯ ರಸ್ತೆ. ಹೌದು, ಮಂಗಳೂರಿನ ಮಾರ್ನಮಿಕಟ್ಟೆಯಿಂದ ಜಪ್ಪಿನಮೊಗರು ಹೋಗುವ ಒಳ ರಸ್ತೆ ಕಳೆದ 60 ವರ್ಷಗಳಿಂದಲೂ ಡಾಂಬರು ಕಂಡಿಲ್ಲ, ರಸ್ತೆಯ ಮಧ್ಯೆ ಹೊಂಡ ಗುಂಡಿಗಳಿಂದಾಗಿ ಮಳೆ ನೀರು ರಸ್ತೆಯಲ್ಲೇ ನಿಂತು ಕೊಂಡಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ.

 ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಸ್ಮಾಟ್ ಸಿಟಿಗೆ ಮಂಗಳೂರು ಮಹಾನಗರ ಪಾಲಿಕೆ ಆಯ್ಕೆಯಾಗಿದ್ರೂ ಕೂಡ ನಗರ ಪ್ರದೇಶದ ಒಳರಸ್ತೆ ಮಾತ್ರ ಅಭಿವೃದ್ಧಿ ಕಾಣುತ್ತಿಲ್ಲ, ಸ್ಮಾಟ್ ಸಿಟಿ ಯೋಜನೆಯಲ್ಲಿ ಸಾಕಷ್ಟು ಅನುದಾನ ಬಿಡುಗಡೆಯಾದ್ರೂ ಕೂಡ, ಮಹಾನಗರ ಪಾಲಿಕೆಯ ಅಧಿಕಾರಿಗಳು ಹೊರ ರಸ್ತೆಯನ್ನ ಮಾತ್ರ ಅಭಿವೃದ್ಧಿಪಡಿಸಲು ಮುಂದಾಗುತ್ತಿದ್ದಾರೆ. ಈ ನಡುವೆ ಮಂಗಳೂರಿನ ಮಾರ್ನಾಮಿಕಟ್ಟೆಯಿಂದ ಜಪ್ಪಿನಮೊಗರು ಹೋಗುವ ಒಳ ರಸ್ತೆಗೆ ಮಾತ್ರ ಇನ್ನೂ ಅಭಿವೃದ್ಧಿ ಯೋಗ ಬಂದಿಲ್ಲ. ಈ ಪ್ರದೇಶದಲ್ಲಿ ವಾಸಿಸುವ ಜನರ ಈ ರಸ್ತೆಯನ್ನ ಅವಲಂಭಿಸಿಕೊಂಡಿದ್ದಾರೆ. ಕೆಲವೊಮ್ಮೆ ನಗರ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಅದ್ರೆ ಹೈವೇಯಿಂದ ಮಂಗಳೂರು ನಗರಕ್ಕೆ ಹೋಗಲು ಈ ರಸ್ತೆಯನ್ನೇ ವಾಹನ ಸವಾರರು ಅವಲಂಭಿಸುತ್ತಾರೆ. ಆದರೆ ಈ ರಸ್ತೆಯ ಅವ್ಯವಸ್ಥೆಯಿಂದಾಗಿ ಸುಗಮ ಸಂಚಾರ ಎನ್ನುವುದು ದುಸ್ತರವಾಗಿಬಿಟ್ಟಿದೆ. 

 ಇನ್ನು ಈ ಸಮಸ್ಯೆಯ ಬಗ್ಗೆ ಅದೆಷ್ಟೋ ಬಾರಿ ಜಪ್ರತಿನಿಧಿಗಳು, ಶಾಸಕರು, ಸಂಸ್ರು ಹೀಗೆ ಎಲ್ಲರಿಗೂ ಮನವಿಗಳನ್ನು ಸಲ್ಲಿಸಲಾಗಿದೆ. ಆದರೆ ಯಾರೊಬ್ಬರು ಕೂಡ ಈ ಒಳರಸ್ತೆಯ ಸಮಸ್ಯೆ ಕುರಿತು ಸ್ಪಂದನೆ ಮಾಡ್ತಾ ಇಲ್ಲ. ಯಾವುದೇ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನ ಹರಿಸಬೇಕಾಗಿದೆ. ಈ ಮೂಲಕ ಈ ಭಾಗದ ಬಹುದಿನಗಳ ಸಮಸ್ಯೆಗೊಂದು ಮುಕ್ತಿಯನ್ನು ಒದಗಿಸಬೇಕಾಗಿದೆ.

Related posts

Leave a Reply

Your email address will not be published. Required fields are marked *