Header Ads
Header Ads
Header Ads
Breaking News

62 ನೇ ಕೇರಳ ರಾಜ್ಯ ಸೀನಿಯರ್ ಕಬಡ್ದಿ ಪಂದ್ಯಾಟ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನ

62 ನೇ ಕೇರಳ ರಾಜ್ಯ ಮಟ್ಟದ ಸೀನಿಯರ್ ಪುರುಷ ಮಹಿಳಾ ಕಬಡ್ಡಿ ಚಾಂಪ್ಯನ್‌ಶಿಪ್ ಸಮಾಪ್ತಿಗೊಂಡಿತು. ಕೇರಳ ರಾಜ್ಯದ 14 ಜಿಲ್ಲೆಗಳ ಕಬಡ್ದಿ ಆಟಗಾರರ ಅಂತಿಮ ಪಂದ್ಯಾಟದಲ್ಲಿ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನವನ್ನು ಪಡೆದರೆ, ಕೊಲ್ಲಂ ಜಿಲ್ಲೆ ಎರಡನೇ ಸ್ಥಾನವನ್ನು ಪಡೆದಿದೆ. ಮಂಜೇಶ್ವರ ಪಂಚಾಯತ್ ಸ್ಟೇಡಿಯಂನಲ್ಲಿ ನಡೆದ ಸೀನಿಯರ್ ಚಾಂಪ್ಯನ್ ಶಿಪ್ ಕಬಡ್ಡಿ ಪಂದ್ಯಾಟಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಜೀವನ್ ಬಾಬು ಚಾಲನೆ ನೀಡಿದ್ದರು. ಮಂಜೇಶ್ವರ ಬ್ಲಾಕ್ ಪಮಚಾಯತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಕಬಡ್ಡಿ ಅಸೋಸಿಯೇಶನ್ ಸೀನಿಯರ್ ಉಪಾಧ್ಯಕ್ಷ ಬಾಬು ಕುದ್ರಿಕ್ಕೋಡ್ ದ್ವಜಾರೋಹಣಗೈಯುವುದರೊಂದಿಗೆ ಪಂದ್ಯಾಟಕ್ಕೆ ಚಾಲನೆ ದೊರಕಿತ್ತು.

ಉದ್ಘಾಟನಾ ಸಮಾರಂಭ ಪ್ರಯುಕ್ತ 14 ಜಿಲ್ಲೆಗಳ ಪುರುಷ ಹಾಗೂ ಮಹಿಳಾ ತಂಡಗಳ ಮಾರ್ಚ್ ಫಾಸ್ಟ್ ನಡೆಯಿತು. ಕಾರ್ಯಕ್ರಮದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತು ಅಧ್ಯಕ್ಷ ಅಝೀಝ್ ಹಾಜಿ ,ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ , ಗ್ರಾಮ ಪಂಚಾಯತು ಸದಸ್ಯೆ ಸುಪ್ರಿಯಾ ಶೆಣೈ , ಎಂ.ಹರಿಶ್ಚಂದ್ರ , ಕಬಡ್ಡಿ ಅಸೋಸಿಯೇಶನ್ ರಾಜ್ಯ ಕಾರ್ಯದರ್ಶಿ ವಿಜಯ ಕುಮಾರ್ , ಪ್ರೊ ಕಬಡ್ಡಿ ಕೋಚ್ ಜಗದೀಶ್ ಕುಂಬಳೆ ಮೊದಲಾದವರು ಪಾಲ್ಗೊಂಡಿದ್ದಾರೆ.

Related posts

Leave a Reply