Header Ads
Breaking News

64ನೇ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ನವಸುಮ ರಂಗಮಂಚ ಕೊಡವೂರು ತಂಡಕ್ಕೆ ಪ್ರಥಮ ಸ್ಥಾನ

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ 64ನೇ ರಾಷ್ಟ್ರಮಟ್ಟದ ನಾಟಕ ಸ್ಪರ್ಧೆಯಲ್ಲಿ ನವಸುಮ ರಂಗಮಂಚ ಕೊಡವೂರು ತಂಡ ಅಂಜಲಿ ಭರ್ ಪಾನಿ ರಾಷ್ಟ್ರಮಟ್ಟದ ಹಿಂದಿ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಪ್ರಥಮ ಸ್ಥಾನವನ್ನು ಪಡೆದಿದೆ ಎಂದು ನಾಟಕದ ನಿರ್ದೇಶಕ ಬಾಲಕೃಷ್ಣ ಕೊಡವೂರು ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ಹಿಂದಿ ಭಾಷೆಯಲ್ಲಿ ಸ್ಪರ್ಧಿಸಿ ಪ್ರಶಸ್ತಿ ಗೆದ್ದ ಕರ್ನಾಟಕದ ಮೊದಲ ತಂಡ ನವಸುಮ ರಂಗಮಂಚ ಕೊಡವೂರು ಆಗಿದೆ. ಒಟ್ಟು 34 ನಾಟಕಗಳು ದೇಶದ ವಿವಿಧ ರಾಜ್ಯಗಳಿಂದ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಕರ್ನಾಟಕವನ್ನು ಹೊರತುಪಡಿಸಿ ಉಳಿದೆಲ್ಲಾ ತಂಡಗಳು ಹಿಂದಿಯಲ್ಲಿ ಪರಿಣಿತಿಯನ್ನು ಹೊಂದಿದ್ದರೂ ಕೂಡ ನಮ್ಮ ತಂಡದ ಕಲಾವಿದರು ಹಿಂದಿ ಭಾಷೆಯಲ್ಲಿ ನಾಟಕ ಅಭ್ಯಾಸ ಮಾಡಿ ಪ್ರದರ್ಶನ ಮಾಡಿ ಬಹುಮಾನ ಪಡೆದಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ ಎಂದರು.

Related posts

Leave a Reply

Your email address will not be published. Required fields are marked *