Header Ads
Header Ads
Header Ads
Breaking News

64 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕೇಂದ್ರ ಮೈದಾನದಲ್ಲಿ ಅದ್ಧೂರಿ ಕಾರ್ಯಕ್ರಮ ರಂಗೇರಿಸಿದ ಸಮುದಾಯತ್ತ ಮೆರವಣಿಗೆ

ಸಹಕಾರ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿದ ದಿವಂಗತ ಜವಹರಲಾಲ್ ನೆಹರೂ ಅವರು ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಜನ್ಮದಿನದಂದು ಒಟ್ಟು 7 ದಿನಗಳ ಕಾಲ ಅಖಿಲ ಭಾರತ ಸಹಕಾರ ಸಪ್ತಾಹವನ್ನು ರಾ ಷ್ಟ್ರದಾದ್ಯಂತ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನಲೆಯಲ್ಲಿ ಮಂಗಳೂರಿನ ಕೇಂದ್ರ ಮೈದಾನದಲ್ಲೂ 64 ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಮುದಾಯದತ್ತ ಮೆರವಣಿಗೆ ನಡೆಯಿತು.ಬ್ಯಾಂಕಿನ ಆವರಣದಿಂದ ಹೊರಟ ಸಮುದಾಯದತ್ತ ಮೆರವಣಿಗೆ ಕೇಂದ್ರ ಮೈದಾನದವರೆಗೆ ಆಗಮಿಸಿತು.

ಕೇಂದ್ರ ಯೋಜನಾ ಸಚಿವ ಡಿ.ವಿ ಸದಾನಂದ ಗೌಡ ಮೆರವಣಿಗೆಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಸೇರಿದಂತೆ ಇನ್ನಿತರ ಪ್ರಮುಖರು ಈ ಸಂದರ್ಭದಲ್ಲಿ ಮೆರವಣಿಗೆಯ ಮುಂದಾಳತ್ವದಲ್ಲಿದ್ದರು.

ವರದಿ: ನಾಗರಾಜ್ ಕಾವೂರು, ಮಂಗಳೂರು

Related posts

Leave a Reply