

ಹಿರಿಯರ ಕಾಲದಿಂದಲೂ ಬಾಳಿ ಬದುಕಿದ ಮನೆಯನ್ನು ತನ್ನ ಕಣ್ಣ ಮುಂದೆಯೇ ಯಂತ್ರ ಬಳಸಿ ಧರೆಗುರುಳಿಸಿದ ದೃಶ್ಯವನ್ನು ಅರಗಿಸಿಕೊಳ್ಳಲಾಗದೆ, ಇದೀಗ ಬೀದಿಯಲ್ಲಿ ಬಿದ್ದು ರೋಧಿಸುತ್ತಿರುವ ಹಿರಿ ಜೀವವೊಂದು ಬ್ಯಾಂಕಿನ ಅಧ್ಯಕ್ಷರು ನಾನು ಮನೆಕಟ್ಟಲು ನಿಮಗೆ ಜಾಗ ನೀಡುತ್ತೇನೆ ಎಂಬುದಾಗಿ ನೀಡಿದ ಭರವಸೆಯ ಮಾತುಗಳೊಂದಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು 86 ವರ್ಷಗಳಿಗೂ ಅಧಿಕ ಅವಧಿಯಿಂದಲೂ ಇದೇ ಜಾಗದಲ್ಲಿ ಜೀವಿಸುತ್ತಿದ್ದಾರೆ ವಯೋ ವೃದ್ಧೆ ಕಲ್ಯಾಣಿ ದೇವಾಡಿಗ ಅವರ ಬಡ ಕುಟುಂಬ. ವಿದ್ಯೆ ಇಲ್ಲದ ಕಾರಣದಿಂದಲೋ…ಕಾನೂನಿನ ತಿಳುವಳಿಗೆ ಇಲ್ಲದಿದ್ದರಿಂದಲೂ ತಾವು ವಾಸವಿದ್ದ ಒಂದಿಷ್ಟು ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಳ್ಳದೆ, ತಮ್ಮ ಜಾಗದ ಮಾಲಿಕರನ್ನು ನಂಬಿ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದು ಬಿಟ್ಟರೆ ಬೇರೆಯಾವುದರ ಪರಿವೆಯೇ ಇದ್ದಿಲ್ಲ ಈ ಕುಟುಂಬಕ್ಕೆ.
ಈ ಕುಟುಂಬದ ಮುಗ್ಧತೆಯನ್ನು ದುರುಪಯೋಗ ಮಾಡಿಕೊಂಡ ಸ್ಥಳದ ಮಾಲಿಕರ ಸಂಬಂಧಿಗಳು ಇವರ ಗಮನಕ್ಕೆ ಬಾರದಂತೆ ಇವರು ವಾಸವಿದ್ದ ಮನೆಯನ್ನೂ ಸೇರಿಸಿ ಬ್ಯಾಂಕಿನಿಂದ ಲಕ್ಷಾಂತರ ರೂ ಸಾಲ ಪಡೆದು, ಅದನ್ನು ಹಿಂದಿರುಗಿಸದೆ ವಂಚಿಸಿದ್ದರಿಂದ, ಅನಿವಾರ್ಯವಾಗಿ ಬ್ಯಾಂಕ್ ಅಧಿಕಾರಿಗಳು ಮನೆ ಬಾಗಿಲಿಗೆ ಬಂದಾಗಲೇ ತಮ್ಮ ಮನೆ ಹಾಗೂ ಜಾಗದ ಮೇಲೆ ಸಾಲ ಮಾಡಲಾಗಿದೆ ಎಂಬ ಸತ್ಯ ಕಟೋರವಾದ ವಿಚಾರ ಮನೆಮಂದಿಗೆ ತಿಳಿದಿದೆ. ತಾವು ಮೋಸ ಹೋದ ಸಂಗತಿ ತಿಳಿದು ಆಕಾಶವೇ ತಲೆ ಮೇಲೆ ಬಿದ್ದ ಅನುಭವದೊಂದಿಗೆ ಆಗ ಅವರಿವರನ್ನು ಕೇಳಿ ಕಾನೂನು ಹೋರಾಟಕ್ಕೆ ಮುಂದಾಗಿ ತಾವು ಕೂಲಿ ಮಾಡಿದ ಬಂದ ಹಣವನ್ನು ನ್ಯಾಯಾಲಯದ ಖರ್ಚಿಗೆ ಸುರಿಯಲಾರಂಭಿಸಲಾಯಿತಾದರೂ ಫಲ ಶೂನ್ಯ,
ಇದೀದ ಬಹಳನ್ನು ಎಚ್ಚರಿಕೆಯ ನೋಟಿಸಿನ ಬಳಿಕ ನ್ಯಾಯಾಲಯದ ತೀರ್ಪಿನಂತೆ ಮನೆಮಂದಿಯನ್ನು ಹೊರ ಹಾಕಿ ಮನೆಯನ್ನು ಸಂಪೂರ್ಣ ದ್ವಂಸಗೊಳಿಸಲಾಗಿದ್ದು, ಮನೆಮಂದಿ ವಂಚನೆಗೊಳಗಾದ ವಿಚಾರ ಹಾಗೂ ಅವರ ಕಷ್ಟಕ್ಕೆ ಸ್ಪಂದಿಸಿದ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಅವರು ಅವರನ್ನು ತಮ್ನ ಕಛೇರಿಗೆ ಕರೆಯಿಸಿ ಅದೇ ಸ್ಥಳದ ಕೊನೆ ಭಾಗದಲ್ಲಿ ಐದು ಸೆಂಟ್ಸ್ ಸ್ಥಳ ನೀಡುವ ಭರವಸೆ ನೀಡಿದ್ದರಿಂದ ಕೊಂಚ ಆಸೆ ಉಳಿಸಿಕೊಂಡಿರುವ ಈ ಕುಟುಂಬ, ಭರವಸೆಯ ನಿರೀಕ್ಷೆಯಲ್ಲಿದ್ದಾರೆ.