Header Ads
Header Ads
Breaking News

9ನೇ ಏಷ್ಯ-ಫೆಸಿಫಿಕ್ ರೀಜನಲ್ ಸ್ಕೌಟ್ ಯೂತ್ ಫಾರಂ:ಕರ್ನಾಟಕದಿಂದ ವಿಟ್ಲದ ಹರ್ಷದ್ ಇಸ್ಮಾಯಿಲ್ ಆಯ್ಕೆ

ವಿಟ್ಲ: ಫಿಲಿಫೈನ್ಸ್‌ನಲ್ಲಿ ನಡೆಯುವ 9ನೇ ಏಷ್ಯ-ಫೆಸಿಫಿಕ್ ರೀಜನಲ್ ಸ್ಕೌಟ್ ಯೂತ್ ಫಾರಂ ಕರ್ನಾಟಕದಿಂದ ಏಕೈಕ ಪ್ರತಿನಿಧಿಯಾಗಿ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸುತ್ತಿರುವ ವಿಟ್ಲ ನಿವಾಸಿ, ಪುತ್ತೂರು ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಹರ್ಷದ್ ಇಸ್ಮಾಯಿಲ್ ಅವರನ್ನು ವಿಟ್ಲದ ನಾಗರೀಕರ ಪರವಾಗಿ ಬೀಳ್ಕೋಡಲಾಯಿತು.ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅರುಣ್ ಎಂ ವಿಟ್ಲ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭ ಮಾತನಾಡಿದ ಅವರು ರಾಜ್ಯದಿಂದ ಏಕೈಕ ಪ್ರತಿನಿಧಿಯಾಗಿ ವಿಟ್ಲದ ಯುವಕ ಭಾಗವಹಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರವಾಗಿದೆ. ಗ್ರಾಮೀಣ ಭಾಗದ ಹಲವು ಪ್ರತಿಭೆಗಳು ಬೆಳೆಯುತ್ತಿದ್ದು, ಅವರಿಗೆ ಪ್ರೋತ್ಸಾಹ ನೀಡಿದರೆ ಇನ್ನಷ್ಟ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಕಲ್ಲಕಟ್ಟ, ವಿಪಕ್ಷ ನಾಯಕ ಅಶೋಕ್ ಕುಮಾರ್ ಶೆಟ್ಟಿ, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಎಸ್‌ಡಿಪಿಐ ಮುಖಂಡರಾದ ಕಲಂದರ್ ಪರ್ತಿಪ್ಪಾಡಿ, ಶಾಕೀರ್ ಅಳಕೆಮಜಲು, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿಕೆಎಂ ಅಶ್ರಫ್, ಜೆಡಿಎಸ್ ಮುಖಂಡ ವಿ.ಎಸ್ ಇಬ್ರಾಹಿಂ ಒಕ್ಕೆತ್ತೂರು, ಅಬೂಬಕ್ಕರ್ ಅನಿಲಕಟ್ಟೆ, ಉಬೈದ್ ಆತೂರು, ಸದಾನಂದ ಗೌಡ ಸೇರಾಜೆ, ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply