Header Ads
Header Ads
Breaking News

94ಸಿಸಿ ವಿತರಣೆಯಲ್ಲಿ ರಾಜಕೀಯ ಸದಸ್ಯನಿಂದ ಕಮಿಷನ್ ಆರೋಪ ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಕ್ರೋಶ

 

ಕಾರ್ಕಳ ಪುರಸಭೆಯ ಸಾಮಾನ್ಯ ಸಭೆ ಪುರಸಭಾ ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಸಿಗಡಿಕೆರೆಯ ಆವರಣಗೋಡೆಗೆ ಅನುದಾನವನ್ನು ಪುಸಭಾ ನಿಧಿಯಿಂದ ಸದಸ್ಯರ ಅನುಮತಿ ಇಲ್ಲದೇ ಇಡಲಾಗಿದೆ ಎನ್ನುವ ಆರೋಪ, ಸಭೆಯಲ್ಲಿನ ನಿರ್ಣಯಗಳನನ್ನು ಮನಬಂದಂತೆ ಬರೆಯಲಾಗುತ್ತಿದೆ, ಅಧ್ಯಕ್ಷರ ಹೆಸರಿನಲ್ಲಿ ಸದಸ್ಯನೊಬ್ಬ ಕಮಿಷನ್ ಪಡೆಯುತ್ತಿದ್ದಾನೆ ಎನ್ನುವ ಆಕ್ರೋಶಗಳು ಮುಖ್ಯವಾಗಿ ಕೇಳಿಬಂದವು.

ಸಭೆಯಲ್ಲಿ ಆಗುವ ನಿರ್ಣಯಗಳು ಪುಸ್ತಕದಲ್ಲಿ ಬರೆಯುವಾಗ ಕತೆಯಂತೆ ಕಾಣುತ್ತಿದೆ. ಮನಬಂದಂತೆ ನಿರ್ಣಯ ಬರೆಯಲಾಗುತ್ತಿದೆ. ಕೆಲವೊಂದು ನಿರ್ಣಯಗಳನ್ನು ಮರು ತಿದ್ದುವುದು ಕಾಣುತ್ತಿದೆ. ಕಾಮಗಾರಿಗಳಿಗೆ ಬೇಕಾದ ಅಂದಾಜು ಪಟ್ಟಿಗಳನ್ನು ಒಟ್ಟಾರೆ ಬರೆಯಲಾಗುತ್ತಿದೆ. ಇನ್ನು ಮುಂದೆ ಸಭೆಯಲ್ಲಿ ಯಾವುದೆಲ್ಲಾ ನಿರ್ಣಯವಾಗುತ್ತದೋ ಅದನ್ನು ಇದ್ದ ಹಾಗೆಯೇ ಆ ಕ್ಷಣವೇ ಬರೆಯಬೇಕು ಎಂದು ಸದಸ್ಯ ಅಶ್ಫಾಕ್ ಅಹಮ್ಮದ್ ಸೂಚಿಸಿದರು. ಅಲ್ಲದೇ ಕೆಲವೊಂದು ನಿರ್ಣಯಗಳಿಗೆ ಅಧ್ಯಕ್ಷರು ಸಹಿಯೇ ಹಾಕಿಲ್ಲ ಎಂದು ಸದಸ್ಯ ಮೊಹಮ್ಮದ್ ಶರೀಫ್ ಪುಸ್ತಕವನ್ನು ಸಭೆಗೆ ತೋರಿಸಿದರು. ಬಳಿಕ ಸ್ಥಳದಲ್ಲಿಯೇ ಅಧ್ಯಕ್ಷರು ಸಹಿ ಮಾಡುವಂತೆ ಸೂಚಿಸಿದರು. ಆ ಬಳಿಕ ಅಧ್ಯಕ್ಷರು ಸಹಿ ಮಾಡಿದರು.

ಸದಸ್ಯ ನವೀನ್ ದೇವಾಡಿಗ ಮಾತನಾಡಿ, ಹಕ್ಕುಪತ್ರ ವಿತರಣೆಯಲ್ಲಿ ರಾಜಕೀಯ ನುಸುಳಿದೆ. ಸದಸ್ಯರು ತಮ್ಮ ತಮ್ಮ ವಾರ್ಡ್‌ಗಳ ಫಲಾನುಭವಿಗಳಿಗೆ ಹಕ್ಕುಪತ್ರ ದೊರಕುವಂತೆ ಎಷ್ಟೋ ವರ್ಷಗಳ ಕಾಲ ಶ್ರಮ ವಹಿಸಿzರುತ್ತಾರೆ. ಪುರಸಭಾ ವ್ಯಾಪ್ತಿಗೆ ಸಂಬಂಧಪಟ್ಟ ೯೪ ಸಿಸಿ ಹಕ್ಕುಪತ್ರಗಳನ್ನು ಪುರಸಭೆಯಲ್ಲಿ ಕೊಡದೇ ಗುಟ್ಟಾಗಿ ತಾ.ಪಂ.ನಲ್ಲಿ ಕೊಡಲಾಗಿದೆ ಇದರಲ್ಲಿ ತಾ.ಪಂನಲ್ಲಿ ಕೊಡಲಾಗಿದೆ ಇದರಲ್ಲಿ ತಾ.ಪಂ ಅಧ್ಯಕ್ಷೆ ಹಾಗೂ ಪುಸಭಾ ಅಧ್ಯಕ್ಷರ ರಾಜಕೀಯ ಪ್ರೇರಿತ ಮನೋಭಾವ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

ಸದಸ್ಯ ಅಕ್ಷಯ್ ರಾವ್ ಮಾತನಾಡಿ, ಬೇರ್‍ಯಾವುದೇ ಸದಸ್ಯರ ಗಮನಕ್ಕೆ ಈ ವಿಚಾರ ತಿಳಿಸದೇ ಅಧ್ಯಕ್ಷರು ತಪ್ಪೆಸಗಿದ್ದಾರೆ. ಇದರಿಂದ ಎಲ್ಲ ಸದಸ್ಯರಿಗೂ ಕಳಂಕ ಬಂದಿದೆ ಎಂದರು.

ಸದಸ್ಯ ವಿನ್ನಿಬೋಲ್ಡ್ ಮೆಂಡೋನ್ಸಾ ಮಾತನಾಡಿ, ಈ ಪ್ರಕರಣದಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ತಮ್ಮ ಜವಾಬ್ದಾರಿ ಮರೆತದ್ದು ಅವಾಂತರಕ್ಕೆ ಕಾರಣವಾಗಿದೆ ಎಂದರು.

ಇದಕ್ಕುತ್ತರಿಸಿದ ಉಪಾಧ್ಯಕ್ಷ ಗಿರಿಧರ್ ನಾಯಕ್, ೯೪ ಸಿಸಿ ಹಕ್ಕುಪತ್ರ ವಿತರಣೆ ಕುರಿತು ನಮ್ಮ ಗಮನಕ್ಕೆ ಬಂದಿರಲಿಲ್ಲ. ಕಾರ್‍ಯಕ್ರಮಕ್ಕೆ ಆಹ್ವಾನಿಸಿದಾಗ ಹೋಗಿದ್ದೆವು ಎಂದು ಸವ್ಮರ್ಥಿಸಿಕೊಂಡರು.

ಸದಸ್ಯ ನವೀನ್ ದೇವಾಡಿಗ ಮಾತನಾಡಿ, ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಆ ಕಾರ್‍ಯಕ್ರಮ ನಡೆದಿದೆ. ತಾ.ಪಂ ಅಧ್ಯಕ್ಷೆ ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಿರುವುದು ಅಕ್ಷಮ್ಯ ಇದಕ್ಕೆ ಅವರು ಉತ್ತರ ನೀಡಬೇಕು ಎಂದು ಸವಾಲೆಸೆದರು.

ಸದಸ್ಯ ಶುಭದ್‌ರಾವ್ ಮಾತನಾಡಿ, ಸಿಗಡಿ ಕೆರೆಯನ್ನು ಶಾಸಕರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಹೂಳೆತ್ತಿದ್ದಾರೆ. ಸಾರ್ವಜನಿಕರಿಂದ ಸಂಗ್ರಹವಾದ ಹಣದಿಂದ ಎಲ್ಲ ಕಾರ್‍ಯವನ್ನು ಮಾಡಲಾಗಿದೆ. ಈಗ ಆವರಣ ಗೋಡೆಯನ್ನು ಪುಸಭಾ ನಗರೋತ್ಥಾನ ನಿಧಿಯಿಂದ ಯಾಕೆ ನೀಡಬೇಕು? ಇದಕ್ಕೆ ಸದಸ್ಯರ ಸಹಮತ ಇಲ್ಲ. ಆವರಣ ಗೋಡೆಯನ್ನೂ ಕೂಡ ಸಾರ್ವಜನಿಕರ ಹಣದಿಂದಲೇ ಮಾಡಲಿ ಎಂದರು. ಇದಕ್ಕುತ್ತರಿಸಿದ ಮೂಖ್ಯಾಧಿಕಾರಿ ಶಾಸಕರ ಮಾರ್ಗದರ್ಶನದಂತೆ ಆ ಅನುದಾನವನ್ನು ಬಳಸಿಕೊಳ್ಳಲಾಗಿದೆ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಸುಭೀತ್ ಕುಮಾರ್, ಸಿಗಡಿಕೆರೆ ಹೂಳೆತ್ತುವ ಕಾರ್‍ಯದಲ್ಲಿ ಅವ್ಯವಹಾರವೇ ನಡೆದಿರಬಹುದು ಅದರ ಕುರಿತು ಮಾತನಾಡುತ್ತಿಲ್ಲ. ಶಾಸಕರು ಮತ್ರ ಜನಪ್ರತಿನಿಧಿಗಳಲ್ಲಿ ನಾವೂ ಕೂಡ ಜನಪ್ರತಿನಿಧಿಗಳು. ಪುಸಭಾ ನಿಧಿಯನ್ನು ಸದಸ್ಯರ ಬಳಿ ಕೇಳದೆಯೇ ವಿನಿಯೋಗಿಸಿರುವುದು ಅಕ್ಷಮ್ಯ ಎಂದರು ಶುಭದ್ ರಾವ್ ಮಾತನಾಡಿ, ಶಾಸಕರು ಹೇಳಿದಂತೆ ಪುಸಭೆ ಆಡಳಿತ ನಡೆಸಬೇಕೆ? ಶಾಸಕರನ್ನೇ ಸಭೆಗೆ ಕರೆಯಿಸಿ ಅವರಿಂದಲೇ ಇದಕ್ಕೆ ಉತ್ತರ ಸಿಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭಾ ಅಧ್ಯಕ್ಷರ ಹೆಸರು ಹೇಳಿಕೊಂಡು, ಪುರಸಭೆಯಲ್ಲಿ ಬೇಕಾದವರಿಗೆ ಕೆಲಸ ಮಾಡಿಸಿ ಕಮಿಷನ್ ಪಡೆಯುವ ಸದಸ್ಯನೋರ್ವ ಪುರಸಭೆಯಲ್ಲಿದ್ದಾನೆ. ಇದು ಪುರಸಭೆಗೆ ಶೋಭೆಯಲ್ಲ. ಇದು ಅಧ್ಯಕ್ಷರಿಗೆ ಮಾಡಿದ ಅವಮಾನ. ಶೀಘ್ರವೇ ಆ ವ್ಯಕ್ತಿಯನ್ನು ಅಧ್ಯಕ್ಷರ ಎದುರುತಂದು ನಿಲ್ಲಿಸಲಾಗುವುದು ಎಂದರು. ಇದಕ್ಕುತ್ತರಿಸಿದ ಅಧ್ಯಕ್ಷೆ ಅನಿತಾ ಅಂಚನ್, ಈ ವಿಷಯ ತಮ್ಮ ಗಮನಕ್ಕೂ ಬಂದಿದೆ ಎಂದಷ್ಟೇ ಹೇಳಿದರು. ಮಸ್ತಕಾಭಿಷೇಕದ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯಲ್ಲಾದ ಕಾಮಗಾರಿಗಳು ಅತ್ಯಂತ ಕಳಪೆಯದ್ದಾಗಿತ್ತು. ಅದರ ಕಳಪೆತನ ಈಗ ಬಯಲಿಗೆ ಬೀಳುತ್ತಿದೆ ಎಂದು ಸದಸ್ಯ ಅಶ್ಫಕ್ ಅಹಮ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ವಾಯಿ ಸಮಿತಿ ಅಧ್ಯಕ್ಷ ಅಕ್ಷಯ್, ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಉಪಸ್ಥಿತರಿದ್ದರು.
ವರದಿ
ಕೆ.ಎಂ ಕಲೀಲ್

Related posts

Leave a Reply