Header Ads
Header Ads
Breaking News

ಶಕ್ತಿಗನರದ ಸಾನಿಧ್ಯ ವಸತಿಯುತ ಶಾಲೆಗೆ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಚೆಕ್ ಹಸ್ತಾಂತರ ಕಾರ್ಯಕ್ರಮ

ಮಂಗಳೂರಿನ ಶಕ್ತಿಗನರದಲ್ಲಿರುವ ವಿಶೇಷ ಮಕ್ಕಳ ವಸತಿಯುತ ಶಾಲೆಗೆ ಮಂಗಳೂರಿನ ಬ್ಯಾಂಕ್ ಆಫ್ ಬರೋಡಾ ಸಂಸ್ಥೆಯವರಿಂದ 2ಲಕ್ಷದ 10ಸಾವಿರ ರೂ ಚೆಕ್ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಬಳಿಕ ವಿಶೇಷ ಮಕ್ಕಳಿಂದ ಸ್ವಾಗತ ನೃತ್ಯ ಹಾಗೂ ಅಮರ್ ಜವಾನ್ ಎಂಬ ಪ್ರಹಸನ ನಡೆಯಿತು. ಈ ಸಂದರ್ಭ ಬ್ಯಾಂಕ್ ಆಫ್ ಬರೋಡಾದ ಜನೆರಲ್ ಮ್ಯಾನೇಜರ್ ಎಮ್.ಜಿ ನಾಗರಾಜ್ ಮಾತನಾಡಿ, ವಿಶೇಷ ಮಕ್ಕಳಿಗೆ ಬೇಕಾಗಿರುವುದು ಸಾನಿಧ್ಯದಂತಹ ಸಂಸ್ಥೆ. ಇಲ್ಲಿರುವ ಸಂಸ್ಥೆಗೆ ಸಾನಿಧ್ಯ ಎಂಬ ಹೆಸರು ನೀಡಿರುವುದು ಒಂದು ಅರ್ಥ ನೀಡಿದೆ ಎಂಬುದಾಗಿ ಸಂಸ್ಥೆಯ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ರು.
ಕಾರ್ಯಕ್ರಮದಲ್ಲಿ ಬ್ಯಾಮಕ್ ಆಫ್ ಬರೋಡಾದ ಬ್ಯಾಂಕ್ ಮ್ಯಾನೇಜರುಗಳು ಸೇರಿದಂತೆ ಶ್ರೀ ಗಣೇಶ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ, ಉಪಾಧ್ಯಕ್ಷ ಎಮ್.ಬಿ.ಡಿ ರಾವ್, ಜಗದೀಶ್ ಶೆಟ್ಟಿ, ಪ್ರೊ. ರಾಧಾಕೃಷ್ಣ, ಮೊಹಮ್ಮದ್ ಬಶೀರ್ ಮತ್ತಿತರರು ಉಪಸ್ಥಿತರಿದ್ರು.

Related posts

Leave a Reply

Your email address will not be published. Required fields are marked *