Header Ads
Header Ads
Breaking News

v4 ನ್ಯೂಸ್ ವರದಿಗೆ ಸ್ಪಂದಿಸಿದ ವಾಟರ್ ಅಥೋರಿಟಿ ನಾಪತ್ತೆಯಾಗಿದ್ದ ನೀರಿನ ಮೋಟಾರ್ ದಿಢೀರ್ ಪ್ರತ್ಯಕ್ಷ

ಕರ್ನಾಟಕ ಕೇರಳ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಸುಮಾರು ಒಂದು ಸಾವಿರ ಮನೆಗಳಿಗೆ ಕೇರಳ ವಾಟರ್ ಆಥೋರಿಟಿ ನೀರು ವಿತರಣೆ ಮಾಡುತಿದ್ದ ಕೊಳವೆ ಬಾವಿಯ ಮೋಟಾರೊಂದು ಹಾಳಾಗಿರುವ ಹಿನ್ನೆಲೆಯಲ್ಲಿ ವಾಟರ್ ಆಥೋರಿಟಿ ಸಿಬ್ಬಂಧಿ ಸುಲೈಮಾನ್ ಎಂಬಾತ ರಿಪೇರಿಗೆಂದು ಹೇಳಿ ಮೋಟಾರನ್ನು ಕೊಂಡು ಹೋದವನು ಎರಡುವರೆ ತಿಂಗಳುಗಳೇ ಕಳೆದರೂ ಮರಳಿ ತಂದಿಲ್ಲವೆಂದು ಊರವರು ಆರೋಪಿಸಿದ್ದರು.

ವರದಿಗೆ ಸ್ಪಂಧಿಸಿದ ಕೇರಳ ವಾಟರ್ ಆಥೋರಿಟಿ ಇಲಾಖೆಯ ಕುಂಬಳೆ ಕಚೇರಿ ಅಧಿಕಾರಿಗಳು ಬುಧವಾರದಂದು ರಾತ್ರಿ ಜನ ಸಂಚಾರ ಕಡಿಮೆ ಇರುವ ಸಂದರ್ಭದಲ್ಲಿ ರಿಪೇರಿಗೆಂದು ಕೊಂಡು ಹೋದ ಮೋಟಾರನ್ನು ತಂದು ಕೊಳವೆ ಬಾವಿಗೆ ಅಳವಡಿಸಿದ್ದಾರೆ.ತಲಪಾಡಿಯಲ್ಲಿ ಎರಡು ಕೊಳವೆ ಬಾವಿಗಳಿವೆ ಇದನ್ನು ಜಂಟಿಯಾಗಿ ಚಲಾಯಿಸಿದರೆ ಮಾತ್ರ ಉದ್ಯಾವರ 10 ನೇ ಮೈಲು ಪ್ರದೇಶದ ತನಕ ನೀರು ಗ್ರಾಹಕರಿಗೆ ತಲುಪುತ್ತಿದೆ. ಅಧಿಕ ಮಂದಿಯೂ ಈ ನೀರನ್ನೇ ಆಶ್ರಯಿಸುವವರಾಗಿದ್ದಾರೆ. ಇದೀಗ ಸೆಕೆ ಕಾಲ ಕೂಡಾ ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಹಾಹಾಕಾರ ಸುರುವಾಗಿದೆ. ಇಂತಹ ಸಂಧಿಗ್ದ ಪರಿಸ್ಥಿತಿಯಲ್ಲೂ ಹಲವು ಸಲ ಸ್ಥಳೀಯ ನಾಗರಿಕರು ವಾಟರ್ ಆಥೋರಿಟಿ ಇಲಾಖೆಯ ಗಮನಕ್ಕೆ ತಂದಿದ್ದರೂ ಯಾವುದೇ ಸ್ಪಂಧನೆಇಲ್ಲವಾಗಿತ್ತು.ಸಿಬ್ಬಂದಿಗಳಿಗೆ ಸೂಕ್ತ ಸಮಯದಲ್ಲಿ ವಾಟರ್ ಆಥೋರಿಟಿ ಸಂಬಳವನ್ನು ನೀಡದ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಸಿಬ್ಬಂದಿಗಳ ಮುಷ್ಕರ ನಡೆಯುತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಸಿಬ್ಬಂದಿಗಳಲ್ಲಿ ವಿನಂತಿಸಿ ತಲಪಾಡಿಯ ಮೋಟರನ್ನು ಅಳವಡಿಸಿರುವುದಾಗಿ ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಗುರುವಾರ ಬೆಳಿಗ್ಗೆ ಸರಿಯಾದ ರೀತಿಯಲ್ಲಿ ಊರವರಿಗೆ ನೀರು ಪೂರೈಕೆ ಆಗಲು ಪ್ರಾರಂಭಗೊಂಡಿದೆ.