Header Ads
Header Ads
Header Ads
Breaking News

ಅಮೆರಿಕ ಓಪನ್ ಟೆನಿಸ್ ಟೂರ್ನಿ ಮರಿಯಾ ಶರಪೋವಾ ೩ನೇ ಸುತ್ತಿಗೆ ಲಗ್ಗೆ

 

ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಮರಳಿ ಪಡೆಯುವ ಹುಮ್ಮಸ್ಸಿನಿಂದ ಕಣಕ್ಕಿಳಿದ ರಷ್ಯಾದ ಮರಿಯಾ ಶರಪೋವಾ ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಮೂರನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ಅರ್ಥೂರ್ ಆಷ್ಲೆ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಶರಪೋವಾ ೬-೭, ೬-೪, ೬-೧ರಲ್ಲಿ ಐದನೇ ರ್‍ಯಾಂಕಿಂಗ್‌ನ ಹಂಗೇರಿಯ ಆಟಗಾರ್ತಿ ಟೈಮಿಯಾ ಬಾಬೊಸ್ ಅವರನ್ನು ಮಣಿಸಿದರು.ಗೆಲುವಿನ ಓಟ ಮುಂದುವರಿಸಿರುವ ಶರಪೋವಾ ಮೊದಲ ಸುತ್ತಿನ ಪಂದ್ಯದಲ್ಲಿ ಎರಡನೇ ಶ್ರೇಯಾಂಕದ ಸಿಮೊನಾ ಹಲೆಪ್‌ಗೆ ಸೋಲುಣಿಸಿದ್ದರು. ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ೧೫ ತಿಂಗಳು ನಿಷೇಧ ಶಿಕ್ಷೆ ಅನುಭವಿಸಿದ ಬಳಿಕ ಅವರು ಮೊದಲ ಗ್ರ್ಯಾಂಡ್‌ಸ್ಲಾಮ್ ಆಡುತ್ತಿದ್ದಾರೆ.‘ಈ ಪಂದ್ಯದಲ್ಲಿ ನಾನು ಎಂದಿನ ಆಟ ಆಡಲಿಲ್ಲ. ಸುಲಭವಾಗಿ ಗೆಲುವು ಸಿಕ್ಕಿತು’ ಎಂದು ೩೦ ವರ್ಷದ ರಷ್ಯಾದ ಆಟಗಾರ್ತಿ ಹೇಳಿದ್ದಾರೆ. ಮುಂದಿನ ಪಂದ್ಯದಲ್ಲಿ ಶರಪೋವಾ ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ ವಿರುದ್ಧ ಆಡಲಿದ್ದಾರೆ.

Related posts

Leave a Reply