Header Ads
Header Ads
Header Ads
Breaking News

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳಿಗೆ ಭಾರತ ತಂಡ ಪ್ರಕಟ

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಟೀಂ ಇಂಡಿಯಾವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ.

ಎಂಎಸ್ ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ, ಹಿರಿಯ ಆಟಗಾರರಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಿದೆ. ಆದರೆ, ರೊಟೇಷನ್ ನಿಯಮ ಪಾಲಿಸಲಾಗುತ್ತಿದ್ದು, ಹಿರಿಯ ಆಟಗಾರರನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಮಿತಿ ಹೇಳಿದೆ.

ಆಸ್ಟ್ರೇಲಿಯಾ ವಿರುದ್ಧದ 5 ಏಕದಿನ ಪಂದ್ಯಗಳ ಪೈಕಿ ಮೂರು ಪಂದ್ಯಗಳಿಗೆ ಮಾತ್ರ ತಂಡ ಪ್ರಕಟಿಸಲಾಗಿದೆ. ಜತೆಗೆ ಪ್ರವಾಸಿ ನ್ಯೂಜಿಲೆಂಡ್ ‘ಎ’ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳನ್ನಾಡಲಿರುವ ಭಾರತ ‘ಎ’ ತಂಡವನ್ನು ಪ್ರಕಟಿಸಲಾಗಿದೆ.ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೆಪ್ಟೆಂಬರ್ 17ರಿಂದ ನಡೆಯಲಿದೆ. ಮೊದಲ ಮೂರು ಪಂದ್ಯಗಳು ಚೆನ್ನೈ, ಕೋಲ್ಕತಾ ಹಾಗೂ ಇಂದೋರ್ ನಲ್ಲಿ ಆಯೋಜನೆಗೊಂಡಿದೆ. ನಂತರ ಬೆಂಗಳೂರು ಹಾಗೂ ನಾಗ್ಪುರದಲ್ಲಿ ಮುಂಡಿನ ಪಂದ್ಯಗಳು ನಡೆಯಲಿವೆ. ನಂತರ ಮೂರು ಟಿ20 ಪಂದ್ಯಗಳ ಸರಣಿ ನಿಗದಿಯಾಗಿದೆ.

 

Related posts

Leave a Reply