Header Ads
Header Ads
Header Ads
Breaking News

ಇಂಡಿಯನ್ ಸೂಪರ್ ಲೀಗ್ (ಐ‌ಎಸ್‌ಎಲ್) ಬೆಂಗಳೂರು ಎಫ್‌ಸಿ ಪಾದಾರ್ಪಣೆ

ಬೆಂಗಳೂರು, ನವೆಂಬರ್ 15 : ಇದೇ ಮೊದಲ ಬಾರಿಗೆ ಇಂಡಿಯನ್ ಸೂಪರ್ ಲೀಗ್ (ಐ‌ಎಸ್‌ಎಲ್) ನಲ್ಲಿ ಬೆಂಗಳೂರು ಎಫ್‌ಸಿ ಪದಾರ್ಪಣೆ ಮಾಡುತ್ತಿದೆ. ಬೆಂಗಳೂರು ಎಫ್ ಸಿ ಪರ ರಾಯಭಾರಿಯಾಗಿ ಕ್ರಿಕೆಟ್ ದಿಗ್ಗಜ ರಾಹುಲ್ ದ್ರಾವಿಡ್ ಅವರು ಕಾಣಿಸಿಕೊಳ್ಳಲಿದ್ದಾರೆ.

ನವೆಂಬರ್ 17 ರಂದು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಮುಂಬೈ ಎಫ್‌ಸಿ ವಿರುದ್ಧ ಅಭಿಯಾನ ಆರಂಭಿಸಲಿದೆ. ಭಾರತದ ಕಿರಿಯದ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಬೆಂಗಳೂರು ಎಫ್ ಸಿ ತಂಡದ ನೀಲಿ ಬಣ್ಣದ ಜರ್ಸಿ ತೊಟ್ಟು ಬೆಂಬಲ ಸೂಚಿಸಿದರು. ಈ ಸೀಸನ್ ಪೂರ್ತಿ ದ್ರಾವಿಡ್ ಅವರು ಬ್ಲೂ ಬಾಯ್ ಪರ ಚಿಯರ್ಸ್ ಮಾಡಲಿದ್ದಾರೆ.

ತವರಿನಂಗಳದಲ್ಲಿ ಜರುಗಲಿರುವ ಇಂಡಿಯನ್ ಸೂಪರ್ ಲೀಗ್‌ನ ಒಟ್ಟು ಒಂಬತ್ತು ಪಂದ್ಯಗಳ ಪೈಕಿ ಮೆನ್ ಇನ್ ಬ್ಲೂ ತಂಡ, ವಾರಂತ್ಯ ಭಾನುವಾರ ನಾಲ್ಕು ಪಂದ್ಯಗಳನ್ನಾಡಲಿದೆ. ಉಳಿದಂತೆ, ಮೂರು ಪಂದ್ಯಗಳು ಗುರುವಾರ ನಡೆದರೆ ಇತರ ಎರಡು ಪಂದ್ಯಗಳು ಶುಕ್ರವಾರ ನಡೆಯಲಿವೆ. ಇದಲ್ಲದೆ ಚೆನ್ನೈಯಿನ್ ಎಫ್‌ಸಿ (ಭಾನುವಾರ ಡಿ.17) ಮತ್ತು ಎಟಿಕೆ (ಭಾನುವಾರ, ಜ.7) ವಿರುದ್ಧ ತವರಿನ ಎರಡು ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳು ಸಂಜೆ 5.30 ಕ್ಕೆ ಆರಂಭವಾಗಲಿವೆ. ಇತರ ಎಲ್ಲಾ ಪಂದ್ಯಗಳು ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ರಾತ್ರಿ ೮ಕ್ಕೆ ಆರಂಭವಾಗಲಿವೆ.

Related posts

Leave a Reply