Header Ads
Header Ads
Header Ads
Breaking News

ಎಂ.ಎಸ್ ದೋನಿಗೆ ಪದ್ಮ ಭೂಷಣ ಬಿಸಿಸಿ‌ಐನಿಂದ ಶಿಫಾರಸ್ ದೇಶದ ಮೂರನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ

ದೇಶದ ಮೂರನೇ ಅತಿ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮ ಭೂಷಣ ಪ್ರಶಸ್ತಿ ಗಾಗಿ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿ‌ಐ) ಶಿಪಾರಸ್ ಮಾಡಿದೆ.
ಭಾರತೀಯ ಕ್ರಿಕೆಟ್‌ಗೆ ಧೋನಿ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ವಿಶ್ವಕಪ್ ವಿಜೇತ ತಂದದ ನಾಯಕನಾಗಿದ್ದ ಧೋನಿ ಹೆಸರನ್ನು ನಾಮನಿರ್ದೇಶನ ಮಾಡಲು ಬಿಸಿಸಿ‌ಐ ನಿರ್ಧರಿಸಿದೆ.ಬಿಸಿಸಿ‌ಐ ಮಂಡಳಿ ಸಭೆಯಲ್ಲಿ ಧೋನಿ ಹೆಸರನ್ನು ಶಿಫಾರಸು ಮಾದಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ.

ಧೋನಿ ನಾಯಕತ್ವದಲ್ಲಿ ಭಾರತ 2007 ಟ್ವೆಂಟಿ-20 ವಿಶ್ವಕಪ್ ಮತ್ತು 2011 ಏಕದಿನ ವಿಶ್ವಕಪ್ ಗೆದ್ದಿತ್ತು.ಧೋನಿ 302 ಏಕದಿನದಲ್ಲಿ 9737 ರನ್ ಮತ್ತು 90 ಟೆಸ್ಟ್ ಪಂದ್ಯಗಳಲ್ಲಿ ೪೮೭೬ ರನ್ ಗಳಿಸಿದ್ದಾರೆ. ಅಲ್ಲದೆ 78 ಟ್ವೆಂಟಿ-20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 1212 ರನ್ ಗಳಿಸಿದ್ದಾರೆ.ಇನ್ನು 16 ಅಂತರಾಷ್ಟ್ರೀಯ ಶತಕ (ಟೆಸ್ಟ್ ನಲ್ಲಿ 6, ಏಕದಿನದಲ್ಲಿ 10) ಮತ್ತು 100 ಅಂತರಾಷ್ಟ್ರೀಯ ಅರ್ಧ ಶತಗಳನ್ನು ಗಳಿಸಿದ್ದಾರೆ.

ವಿಕೆಟ್ ಕೀಪರ್ ಆಗಿ ಧೋನಿ 584 ಕ್ಯಾಚ್ ಗಳನ್ನು ಹಿಡಿದಿದ್ದು ಇದರಲ್ಲಿ ಟೆಸ್ಟ್‌ನದು 256 ಏಕದಿನದ್ 285 ಮತ್ತು ಟ್ವೆಂಟಿ-20ಯ 43 ಕ್ಯಾಚ್ ಗಳು ಸೇರಿವೆ.
ಇದಾಗಲೇ ಅರ್ಜುನ, ರಾಜೀವ್ ಗಾಂಧಿ ಖೇಲ್ ರತ್ನ ಮತ್ತು ಪದ್ಮಶ್ರೀ ಪುರಸ್ಕಾರಕ್ಕೆ ಬಾಜನರಾಗಿರುವ ಧೋನಿ ಪದ್ಮ ಭುಷಣ ಪ್ರಶಸ್ತಿಗೆ ಅರ್ಹವಾದರೆ ಈ ಪ್ರಶಸ್ತಿ ಪಡೆದ 11 ನೇ ಕ್ರಿಕೆಟಿಗರಾಗಲಿದ್ದಾರೆ.

Related posts

Leave a Reply