Header Ads
Header Ads
Header Ads
Breaking News

ಏಷ್ಯನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಸೆಮಿಫೈನಲ್‌ನಲ್ಲಿ ಪೈಪೋಟಿ ನಡೆಸಲಿರುವ ಪೂನಿಯಾ

ಭಾರತದ ಭರವಸೆಯ ಬಾಕ್ಸರ್ ಸೀಮಾ ಪೂನಿಯಾ ಏಷ್ಯನ್ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್ಷಿಪ್ ಆರಂಭವಾಗುವ ಮೊದಲೇ ಸೆಮಿಫೈನಲ್ ಪ್ರವೇಶಿಸಿದ್ದಾರೆ! ಬುಧವಾರ ಪ್ರಕಟವಾದ ಡ್ರಾ ಪ್ರಕಾರ 81ಕೆ.ಜಿ ವಿಭಾಗದಲ್ಲಿ ಕೇವಲ ನಾಲ್ವರು ಸ್ಪರ್ಧಿಗಳು ಇರುವ ಕಾರಣ ಪೂನಿಯಾ ನೇರವಾಗಿ ಸೆಮಿಫೈನಲ್ನಲ್ಲಿ ಪೈಪೋಟಿ ನಡೆಸಲಿದ್ದಾರೆ. ಗುರುವಾರದಿಂದ ಚಾಂಪಿಯನ್ಷಿಪ್ ಆರಂಭವಾಗಲಿದೆ. ಪೂನಿಯಾ ನವೆಂಬರ್ 7 ರಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಗುಜಲ್ ಇಸ್ಮಾತೋವಾ ವಿರುದ್ಧ ಸೆಣಸಲಿದ್ದಾರೆ.

ಮೇರಿ ಕೋಮ್ ಭರವಸೆ: ಭಾರತದ ಅಗ್ರಗಣ್ಯ ಬಾಕ್ಸರ್ ಮೇರಿ ಕೋಮ್ ೪೮ಕೆ.ಜಿ ವಿಭಾಗದಲ್ಲಿ ಗುರುವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ. ಒಲಿಂಪಿಕ್ಸ್ನಲ್ಲಿ ಕಂಚು ಹಾಗೂ ಐದು ಬಾರಿ ವಿಶ್ವ ಚಾಂಪಿಯನ್ಷಿಪ್ ಗೆದ್ದಿರುವ ಮಣಿಪುರದ ಬಾಕ್ಸರ್ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಥಳೀಯ ಆಟಗಾರ್ತಿ ಡೀಮ್ ತಿ ತ್ರಿನ್ ಕಿಯು ವಿರುದ್ಧ ಆಡಲಿದ್ದಾರೆ. ಈ ಟೂರ್ನಿಯಲ್ಲಿ ಮೇರಿ ನಾಲ್ಕು ಚಿನ್ನದ ಪದಕ ಜಯಿಸಿದ ದಾಖಲೆ ಹೊಂದಿದ್ದಾರೆ.

20 ದೇಶಗಳ 107 ಬಾಕ್ಸರ್ಗಳು ಇಲ್ಲಿ ಸ್ಪರ್ಧಿಸಲಿದ್ದಾರೆ. ಭಾರತ ತಂಡ ಇಲ್ಲಿಯವರೆಗೂ ಈ ಟೂರ್ನಿಯಲ್ಲಿ 19 ಚಿನ್ನ, 21 ಬೆಳ್ಳಿ ಹಾಗೂ 20 ಕಂಚಿನ ಪದಕಗಳನ್ನು ಗೆದ್ದು ಮೂರನೇ ಸ್ಥಾನದಲ್ಲಿದೆ.

Related posts

Leave a Reply