Header Ads
Header Ads
Header Ads
Breaking News

ಐಬಿ‌ಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್‌ಶಿಪ್ ಭಾರತದ ಪಂಕಜ್ ಅಡ್ವಾಣಿಗೆ ಪ್ರಶಸ್ತಿ

 

ಅಮೋಘ ಆಟದ ಮೂಲಕ ಇರಾನ್ನ ಅಮೀರ್ ಸರ್ಖೋಷ್ ಅವರನ್ನು ಮಣಿಸಿದ ಭಾರತದ ಪಂಕಜ್ ಅಡ್ವಾನಿ ಐಬಿ‌ಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್ಷಿಪ್ನ ಪ್ರಶಸ್ತಿ ಎತ್ತಿ ಹಿಡಿದರು.
ಅಲ್ ಅರಬಿ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ಅಡ್ವಾನಿ 8-2 ರಿಂದ ಎದುರಾಳಿಯನ್ನು ಮಣಿಸಿ 18 ನೇ ಪ್ರಶಸ್ತಿಯ ಸಂಭ್ರಮದಲ್ಲಿ ಮಿಂದರು.

15 ಫ್ರೇಮ್ಗಳ ಪಂದ್ಯದಲ್ಲಿ ಮೊದಲ ಫ್ರೇಮ್ ತಮ್ಮದಾಗಿಸಿಕೊಂಡ ಅಮೀರ್ ಮೇಲುಗೈ ಸಾಧಿಸಿದರು. ಆದರೆ ಇದರಿಂದ ಅಡ್ವಾನಿ ಅವರ ಆತ್ಮವಿಶ್ವಾಸ ಕುಂದಲಿಲ್ಲ. ವಿಶ್ವಾಸದಲ್ಲೇ ಎರಡನೇ ಫ್ರೇಮ್ ಆಡಲು ಇಳಿದ ಇರಾನ್ ಆಟಗಾರ ಒಂದು ಹಂತದಲ್ಲಿ 2-0 ಯಿಂದ ಮುನ್ನಡೆದರು.

ಈ ಸಂದರ್ಭದಲ್ಲಿ ಮರು ಹೋರಾಟ ನಡೆಸಿದ ಅಡ್ವಾನಿ ಪಂದ್ಯದ ಮೇಲೆ ಮಾರಮ್ಯ ಸ್ಥಾಪಿಸಿದರು. ಹೀಗಾಗಿ ಅವರು ಸುಲಭವಾಗಿ 5-2 ರ ಮುನ್ನಡೆ ಸಾಧಿಸಿದರು. ನಂತರ ಹಿಂದಿರುಗಿ ನೋಡಲಿಲ್ಲ. ಅವರ ಪ್ರಬಲ ಆಟದ ಮುಂದೆ ಬೆದರಿದ ಅಮೀರ್ ಸುಧಾರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ ಅದಕ್ಕೆ ಫಲ ಸಿಗಲಿಲ್ಲ. ಎಂಟನೇ ಫ್ರೇಮ್ನಲ್ಲಿ 41 ಪಾಯಿಂಟ್ಗಳನ್ನು ಕಲೆ ಹಾಕಿದ ಪಂಕಜ್ 6-2 ರಿಂದ ಉತ್ತಮ ಮುನ್ನಡೆ ಸಾಧಿಸಿದರು.

Related posts

Leave a Reply