Breaking News

ಐಲೀಗ್ ಫುಟ್‌ಬಾಲ್ ಪ್ರಶಸ್ತಿ, ಉತ್ತಮ ಆಟಗಾರ ಸುನಿಲ್ ಚೆಟ್ರಿ

ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡದ ನಾಯಕ ಸುನಿಲ್ ಚೆಟ್ರಿ ಈ ಬಾರಿಯ ಐಲೀಗ್ನಲ್ಲಿ ಉತ್ತಮ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಐಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಚೆಟ್ರಿ ಒಟ್ಟು ಏಳು ಗೋಲುಗಳನ್ನು ದಾಖಲಿಸಿದ್ದರು.
ಎಂಟು ಗೋಲುಗಳನ್ನು ಸಮರ್ಥವಾಗಿ ತಡೆದ ಮೋಹನ್ ಬಾಗನ್ ತಂಡದ ದೇವಜಿತ್ ಮಜುಮ್ದಾರ್ಗೆ ಶ್ರೇಷ್ಠ ಗೋಲ್ ಕೀಪರ್ ಪ್ರಶಸ್ತಿ ಲಭಿಸಿದೆ. ಬಾಗನ್ ತಂಡದ ಅನಾಸ್ ಎದತೋಡಿಕಾ ಉತ್ತಮ ಡಿಫೆಂಡರ್ ಹಾಗೂ ಐಜ್ವಾಲ್ ಎಫ್ಸಿ ಆಟಗಾರ ಅಲ್ಫ್ರೆಡ್ ಕೆಮಹ್ ಜರಾಯನ್ ಮಿಡ್ಫೀಲ್ಡರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಉತ್ತಮ ಸ್ಟ್ರೈಕರ್ ಪ್ರಶಸ್ತಿ ಶಿಲ್ಲಾಂಗ್ ಲಜಾಂಗ್ ತಂಡದ ಪೆರಿಕ್ ದಿಪಿಂದಾ ಡೆಕಾ ಅವರ ಪಾಲಾಗಿದೆ. ೧೮ ಪಂದ್ಯಗಳಲ್ಲಿ ಅವರು ೧೧ ಗೋಲು ದಾಖಲಿ ಸಿದ್ದಾರೆ.
ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಡಿ‌ಎಸ್ಕೆ ಶಿವಾಜಿಯನ್ಸ್ ತಂಡದ ಜೆರಿ ಲಾಲ್ ರಿಂಜುವುಲಾ ಅವರಿಗೆ ನೀಡಲಾಗಿದೆ. ಸಯ್ಯದ್ ಅಬ್ದುಲ್ ರಹೀಮ್ ಉತ್ತಮ ಕೋಚ್ ಐಜ್ವಾಲ್ ತಂಡದ ಕೋಚ್ ಖಾಲೀದ್ ಜಮೀಲ್ ಅವರಿಗೆ ನೀಡಲಾಗಿದೆ. ಚರ್ಚಿಲ್ ಬ್ರದರ್ಸ್ ಮತ್ತು ಎಫ್ಸಿ ಗೋವಾ ತಂಡಗಳು ಶಿಸ್ತುಬದ್ಧ ತಂಡಗಳು ಗೌರವ ಗಳಿಸಿವೆ. ಡಿ‌ಎಸ್ಕೆ ಶಿವಾಜಿಯನ್ಸ್, ಬೆಂಗಳೂರು ಎಫ್ಸಿ ತಂಡಗಳು ಆಯೋಜಕ ಪ್ರಶಸ್ತಿ ಪಡೆದಿವೆ.

Related posts

Leave a Reply