Header Ads
Header Ads
Header Ads
Breaking News

ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್ ಪಿಸ್ತೂಲು ವಿಭಾಗದಲ್ಲಿ ಮೂರೂ ಪದಕಗಳನ್ನು ಗೆದ್ದ ಭಾರತ ತಂಡ ಶಾಜರ್ ರಿಜ್ವಿ, ಓಂಕಾರ್ ಸಿಂಗ್ ಹಾಗೂ ಜಿತು ರಾಯ್ ಗೆ ಪದಕ

ಭಾರತ ತಂಡ ಕಾಮನ್ವೆಲ್ತ್ ಶೂಟಿಂಗ್ ಚಾಂಪಿಯನ್ಷಿಪ್ನ ಪಿಸ್ತೂಲು ವಿಭಾಗದಲ್ಲಿ ಮೂರೂ ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಕ್ಲೀನ್ಸ್ವೀಪ್ ಸಾಧಿಸಿದೆ. 10 ಮೀಟರ್ಸ್ ಏರ್ ಪಿಸ್ತೂಲು ವಿಭಾಗದಲ್ಲಿ ಭಾರತದ ಶಾಜರ್ ರಿಜ್ವಿ, ಓಂಕಾರ್ ಸಿಂಗ್ ಹಾಗೂ ಜಿತು ರಾಯ್ ಕ್ರಮವಾಗಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಗೆದ್ದರು.

16 ಸ್ಪರ್ಧಿಗಳ ಅರ್ಹತಾ ಸುತ್ತಿನಲ್ಲಿ ರಿಜ್ವಿ 581 ಪಾಯಿಂಟ್ಸ್ ಕಲೆಹಾಕುವ ಮೂಲಕ ಮೊದಲ ಸ್ಥಾನ ಪಡೆದಿದ್ದರು. ಓಂಕಾರ್ ಹಾಗೂ ಜಿತು ಕ್ರಮವಾಗಿ 576 ಮತ್ತು 571 ಪಾಯಿಂಟ್ಸ್ಗಳಿಂದ ನಂತರದ ಸ್ಥಾನ ಗಳಿಸಿದ್ದರು.

ಅಂತಿಮ ಸುತ್ತಿನ ಆರಂಭದಲ್ಲಿ ಜಿತು ಮುನ್ನಡೆ ಹೊಂದಿದ್ದರು. 18 ನೇ ಶಾಟ್ ವೇಳೆ ಓಂಕಾರ್ ಮುನ್ನಡೆ ಸಾಧಿಸಿದರು. 20 ಶಾಟ್ಗಳ ಬಳಿಕ ಯುವ ಸ್ಪರ್ಧಿ ಶಾಜರ್ ತಮ್ಮ ಪ್ರಾಬಲ್ಯವನ್ನು ಬಿಟ್ಟುಕೊಡಲಿಲ್ಲ. 240.7 ಪಾಯಿಂಟ್ಸ್ಗಳಿಂದ ಅವರು ಅಗ್ರಸ್ಥಾನ ಕಾಯ್ದುಕೊಂಡರು. ಓಂಕಾರ್ 236 ಪಾಯಿಂಟ್ಸ್ ಪಡೆದರೆ, ಜಿತು 214.1 ಪಾಯಿಂಟ್ಸ್ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪೂಜಾಗೆ ಚಿನ್ನ: ಮಹಿಳೆಯರ 10 ಮೀ ರೈಫಲ್ ವಿಭಾಗದಲ್ಲಿ ಭಾರತದ ಪೂಜಾ ಘಾತ್ಕರ್ ಚಿನ್ನಕ್ಕೆ ಗುರಿನೆಟ್ಟಿದ್ದಾರೆ. ಬೆಳ್ಳಿ ಪದಕವನ್ನು ಭಾರತದವರೇ ಆದ ಅಂಜುಮ್ ಮೊದ್ಗಿಲ್ ಜಯಿಸಿದ್ದಾರೆ. ಸಿಂಗಪುರದ ಮಾರ್ಟಿನಾ ವೆಲೊಸೊ ಕಂಚಿಗೆ ಕೊರಳೊಡ್ಡಿದ್ದಾರೆ.

Related posts

Leave a Reply