Header Ads
Header Ads
Breaking News

ಕಾಮನ್ ವೆಲ್ತ್ ಕ್ರೀಡಾಕೂಟ: ಭಾರತದ ಅಭಿಯಾನ ಅಂತ್ಯ,66 ಪದಕ ಗೆದ್ದ ಭಾರತೀಯ ಕ್ರೀಡಾಳುಗಳು

ಆಸ್ಟ್ರೇಲಿಯಾದಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ರಾಂಕಿ ರೆಡ್ಡಿ ಮತ್ತು ಚಿರಾಕ್ ಶೆಟ್ಟಿ ಬೆಳ್ಳಿ ಪದಕ ಜಯಿಸಿದ್ದು, ಆ ಮೂಲಕ ಕ್ರೀಡಾಕೂಟದಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ.

ಇಂಗ್ಲೆಂಡ್ ನ ಮಾರ್ಕಸ್ ಮತ್ತು ಕ್ರಿಸ್ ವಿರುದ್ಧ 13-21, 16-21 ನೇರ ಸೆಟ್ ಗಳಿಂದ ಭಾರತದ ಜೋಡಿಯನ್ನು ಸೋಲಿಸಿ ಚಿನ್ನ ಗೆದ್ದಿತು. ಕ್ರೀಡಾಕೂಟದಲ್ಲಿ ಭಾರತ 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ಗೆದ್ದು ಕ್ರೀಡಾಕೂಟದಲ್ಲಿ ಒಟ್ಟಾರೆ 66 ಪದಕಗಳನ್ನು ಗೆದ್ದುಕೊಂಡಿದೆ.

Related posts