Header Ads
Header Ads
Breaking News

ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ ಮುಂದುವರಿದ ಭಾರತದ ಪದಕದ ಬೇಟೆ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಸಂಜಿತಾ ಚಾನುಗೆ ಚಿನ್ನ

ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಮಹಿಳೆಯ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಸಂಜಿತಾ ಚಾನು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.53 ಕೆಜಿ ತೂಕದ ವಿಭಾಗದಲ್ಲಿ ಸಂಜಿತಾ ಚಾನು ಅಗ್ರ ಸ್ಥಾನ ಗಳಿಸುವ ಮೂಲಕ ಚಿನ್ನದ ಪದಕ ಗಳಿಸಿದ್ದಾರೆ.

ಮೂರು ಹಂತಗಳ ಸ್ಪರ್ಧೆಯಲ್ಲಿ ಕ್ರಮವಾಗಿ 81 ಕೆಜಿ, 82ಕೆಜಿ ಮತ್ತು 84ಕೆಜಿ ಸೇರಿದಂತೆ ಸಂಜಿತಾ ಚಾನು ಒಟ್ಟು 192 ಕೆಜಿ ತೂಕ ಎತ್ತುವ ಮೂಲಕ ಅಗ್ರ ಸ್ಥಾನ ಗಳಿಸಿದ್ದಾರೆ. ಇನ್ನು 182 ಕೆಜಿ ತೂಕ ಎತ್ತಿದ ಪಪುವಾ ನ್ಯೂಗಿನಿಯಾದ ಲೋಡಿಕಾ ಅವರು ಎರಡನೇ ಸ್ಥಾನ ಪಡೆದು ಬೆಳ್ಳಿ ಗಳಿಸಿದರೆ, ನ್ಯೂಜಿಲೆಂಡ್ ನ ರಾಚೆಲ್ ಲೆಬ್ಲಾಂಕ್-ಬಾಝಿನೆಟ್ ಅವರು ಒಟ್ಟು 181 ಕೆಜಿ ತೂಕ ಎತ್ತುವ ಮೂಲಕ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಭಾಜನರಾದರು.ಇನ್ನು ಪ್ರಸ್ತುತ ಚಿನ್ನ ಪದಕ ಗಳಿಸಿರುವ ಸಂಜಿತಾ ಚಾನು 2014ರಲ್ಲಿ ನಡೆದ ಗ್ಲಾಸ್ಗೋ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲೂ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು.ಹಾಲಿ ಕ್ರೀಡಾಕೂಟದಲ್ಲಿ ಭಾರತಕ್ಕೆ ಇದು ಎರಡನೇ ಚಿನ್ನದ ಪದಕವಾಗಿದ್ದು, ನಿನ್ನೆ ಇದೇ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಮೀರಾಬಾಯಿ ಚಾನು ಅವರು ಚಿನ್ನದ ಪದಕ ಗಳಿಸಿದ್ದರು. ಇನ್ನು ಗುರುರಾಜ ಅವರು ಬೆಳ್ಳಿ ಪದಕ ತಂದು ಕೊಟ್ಟಿದ್ದರು.