Header Ads
Header Ads
Breaking News

ಗಂಗೊಳ್ಳಿ ಪ್ರೀಮಿಯರ್ ಲೀಗ್ -5 ಕ್ರಿಕೆಟ್ ಪಂದ್ಯಾಟ – ಇಲೆವೆನ್ ವಾರಿಯರ್ಸ್ಉಡುಪಿ ತಂಡ ಚಾಂಪಿಯನ್

ಅರಬ್ ನಾಡಿನಲ್ಲಿ ಮತ್ತೊಮ್ಮೆ ಕರ್ನಾಟಕದ ಕ್ರಿಕೆಟ್ ಕದನ ನಡೆಯಿತು. ಶಾರ್ಜಾದ ಅಲ್ ಬಟಾಯೆ ಕ್ರಿಕೆಟ್ ಮೈದಾನದಲ್ಲಿ ಜಿಪಿಎಲ್ ಅಂದರೆ ಗಂಗೊಳ್ಳಿ ಪ್ರೀಮಿಯರ್ ಲೀಗ್ ಸೀಸನ್ ೫ ಕ್ರಿಕೆಟ್ ಪಂದ್ಯಾಟ ನಡೆಯಿತು. ಎಂಟು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಇಲೆವೆನ್ ವಾರಿಯರ್‍ಸ್ ಉಡುಪಿ ತಂಡವು ಗಂಗೊಳ್ಳಿ ಪ್ರೀಮಿಯರ್ ಕಪ್‌ನ್ನು ತನ್ನ ಮುಡಿಗೇರಿಸಿಕೊಂಡಿತು. ನಾರ್ದರ್ನ್ ಮಂಗಳೂರು ತಂಡವು ರನ್ನರ್ ಅಪ್ ಆಗಿ ಹೊರಹೊಮ್ಮಿತು.

ಶಾರ್ಜಾದ ಅಲ್ ಬಟಾಯೆ ಕ್ರಿಕೆಟ್ ಮೈದಾನದಲ್ಲಿ ಅಹೋರಾತ್ರಿ ಪಂದ್ಯಾಟ ನಡೆಯಿತು. ಪಂದ್ಯಾಟದಲ್ಲಿ ಆಟೋಡಿಯಲ್ ಮೂಡುಬಿದ್ರೆ, ಚಕ್ರವರ್ತಿ ಕುಂದಾಪುರ, ಡಿಜೆ ಚಾಲೆಂಜರ್‍ಸ್ ಪಡೀಲ್, ಇಲೆವೆನ್ ವಾರಿಯರಸ್ ಉಡುಪಿ, ಗೊಂಗೊಳ್ಳಿ ಸ್ಟ್ರೈಕರ್‍ಸ್, ಹೀಟ್‌ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್‍ಸ್, ಎಮ್. ಎಮ್. ವಾರಿಯರ್‍ಸ್ ಯೆಯ್ಯಾಡಿ, ಟೀಮ್ ನೋರ್ದರ್‌ನ್ ಮಂಗಳೂರು ತಂಡಗಳ ನಡುವೆ ಕ್ರಿಕೆಟ್ ಸಮರ ನಡೆಯಿತು. ಎಂಟು ತಂಡಗಳ ನಡುವೆ ನಡೆದ ಹೋರಾಟದಲ್ಲಿ ಇಲೆವೆನ್ ವಾರಿಯರ್‍ಸ್ ಮತ್ತು ನಾರ್ದರ್ನ್ ಮಂಗಳೂರು ತಂಡಗಳು ಫೈನಲ್ ಪ್ರವೇಶಿಸಿದ್ದವು.

ಅಂತಿಮ ಹಣಾಹಣಿಯಲ್ಲಿ ಇಲೆವೆನ್ ವಾರಿಯರ್ಸ್ ಉಡುಪಿ ತಂಡವು 17 ರನ್‌ಗಳಲ್ಲಿ ನಾರ್ದರ್ನ್ ಮಂಗಳೂರು ತಂಡವನ್ನು ಸೋಲಿಸಿ ಗಂಗೊಳ್ಳಿ ಪ್ರೀಮಿಯರ್ ಲೀಗ್ ಸೀಸನ್ ೫ನ ಕಪ್‌ನ್ನು ತನ್ನದಾಗಿಸಿಕೊಂಡಿತು. ಇಲೆವೆನ್ ವಾರಿಯರಸ್ ಉಡುಪಿ ತಂಡದ ಶಾನ್ ಅವರು ಮ್ಯಾನ್ ಆಫ್ ದ ಮ್ಯಾಚ್, ರಾವೆಲ್ ಅವರು ಮ್ಯಾನ್ ಆಫ್ ದ ಸಿರೀಸ್, ನಾರ್ದರ್ನ್ ಮಂಗಳೂರು ತಂಡದ ನಾಯಕ ಆಶಿಕ್ ಬೆಸ್ಟ್ ಕ್ಯಾಪ್ಟನ್ ಪ್ರಶಸ್ತಿ ಗೆದ್ದುಕೊಂಡರು. ಇಲೆವೆನ್ ವಾರಿಯರಸ್ ಉಡುಪಿ ತಂಡದ ಶಾನ್ ಪರ್ಪಲ್ ಕ್ಯಾಪ್ ಮತ್ತು ರಾವೆಲ್ ಅವರು ಆರೆಂಜ್ ಕ್ಯಾಪ್ ನ್ನು ತನ್ನದಾಗಿಸಿಕೊಂಡರು.


ಕ್ಯಾಪ್ರೈಸ್ ವಾಚಸ್‌ನ ಸಿಇಒ ಮತ್ತು ಚೇರ್‌ಮ್ಯಾನ್ ಎಮ್.ಎಸ್. ಖಾನ್, ಇಲೆವೆನ್ ವಾರಿಯರಸ್ ಉಡುಪಿ ತಂಡದ ಮಾಲಕ ಸಾಮಿ, ಸಂಯೋಜಕರಾದ ನಿಸಾರ್ ಅಹ್ಮದ್ ಖಾನ್, ಅಲ್ತಾಫ್ ಖಲೀಫ್, ಇನಾಯತುಲ್ಲಾ ಎಂ.ಎಚ್., ಮುತಾಹಿರ್ ಎಂ.ಎಚ್., ಮುಹಮ್ಮದ್ ಸಮೀರ್, ಶರೀಫ್ ಮತ್ತಿತರ ಗಣ್ಯರು ಉಪಸ್ಥಿತರಿದ್ದು ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.

Related posts

Leave a Reply

Your email address will not be published. Required fields are marked *