Header Ads
Header Ads
Header Ads
Breaking News

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ ತಮ್ಮ ಹಳೆಯ ತಂಡಗಳಿಗೆ ವಾಪಾಸ್ಸಾದ ಸಿಂಧು, ಸೈನಾ

ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್(ಪಿಬಿ‌ಎಲ್) ಆಟಗಾರರ ಹರಾಜಿನಲ್ಲಿ ಸೋಮವಾರ ಭಾರತದ ಅಗ್ರ ಬ್ಯಾಡ್ಮಿಂಟನ್ ತಾರೆಯರಾದ ಪಿ.ವಿ. ಸಿಂಧು ಮತ್ತು ಸೈನಾ ನೆಹ್ವಾಲ್ ತಮ್ಮ ಹಳೆಯ ತಂಡಗಳಿಗೆ ವಾಪಸಾಗಿದ್ದಾರೆ.

ಹಳೆಯ ತಂಡಗಳಲ್ಲಿ ಮರಳಿ ಸ್ಥಾನ ಪಡೆದ ಆಟಗಾರರು ಕಳೆದ ವರ್ಷದ ವೇತನಕ್ಕಿಂತ ಶೇ 25 ರಷ್ಟು ಅಧಿಕ ವೇತನ ಪಡೆಯಲಿದ್ದಾರೆ. ’ರೈಟು -ಟು-ಮ್ಯಾಚ್ ’ ಕಾರ್ಡ್ ಮೂಲಕ ತಂಡಗಳಿಗೆ ಸೇರ್ಪಡೆಯಾದವರಿಗೆ ಕಳೆದ ವರ್ಷದ ವೇತನಕ್ಕಿಂತ ಶೇ 10 ರಷ್ಟು ಅಧಿಕ ವೇತನ ದೊರೆಯಲಿದೆ.ಒಲಿಂಪಿಕ್ಸ್ನಲ್ಲಿ ಬೆಳ್ಳಿ ವಿಜೇತೆ ಸಿಂಧು ಹಾಲಿ ಪಿಬಿ‌ಎಲ್ ಚಾಂಪಿಯನ್ ಚೆನ್ನೈ ಸ್ಮಾಷರ್ಸ್ ತಂಡದಲ್ಲಿ 48.75 ಲಕ್ಷ ರೂ.ಗೆ ಮರಳಿ ಸೇರ್ಪಡೆಗೊಂಡರು. 22 ರ ಹರೆಯದ ಸಿಂಧು ಇತ್ತೀಚೆಗೆ ಗ್ಲ್ಲಾಸ್ಗೋದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಮತ್ತು ಕೊರಿಯ ಸೂಪರ್ ಸಿರೀಸ್ ಪ್ರಶಸ್ತಿ ಜಯಿಸಿದ್ದರು. ಸಿಂಧು ಕಳೆದ ವರ್ಷ 39 ಲಕ್ಷ ರೂ.ಗೆ ಚೆನ್ನೈ ಸ್ಮಾಷರ್ಸ್ ತಂಡ ಸೇರಿದ್ದರು.ಗ್ಲಾಸ್ಗೋದಲ್ಲಿ ಕಂಚು ಜಯಿಸಿದ ಸೈನಾ ನೆಹ್ವಾಲ್ ಅವರು ಅವಧೆ ವಾರಿಯರ್ಸ್ ತಂಡಕ್ಕೆ 41.25 ರೂ.ಗೆ ಮರಳಿ ಸೇರ್ಪಡೆಯಾದರು. ಕಳೆದ ವರ್ಷದ ಅವರ ಮೂಲಬೆಲೆ 39 ಲಕ್ಷ ರೂ. ಆಗಿತ್ತು.ಇಂಡೋನೇಷ್ಯಾ ಮತ್ತು ಆಸ್ಟ್ರೇಲಿಯ ಓಪನ್ನಲ್ಲಿ ಪ್ರಶಸ್ತಿ ಜಯಿಸಿದ್ದ ಕೆ. ಶ್ರೀಕಾಂತ್ ಅವರು ತಮ್ಮ ಹಳೆಯ ತಂಡ ಅವಧೆ ವಾರಿಯರ್ಸ್ನಲ್ಲಿ ಆಡಲಿದ್ದಾರೆ. ಅವರು ’ರೈಟ್ ಟು ಮ್ಯಾರ್ಚ್ ’ಕಾರ್ಡ್ ಮೂಲಕ 56.10 ಲಕ್ಷ ರೂ.ಗೆ ಅವಧೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

Related posts

Leave a Reply