Header Ads
Header Ads
Breaking News

ಫಿಡೆ ಮಾಸ್ಕೊ ಗ್ರ್ಯಾನ್ ಪ್ರಿಚೆಸ್ ಟೂರ್ನಿ ಡ್ರಾ

ಹಿಂದಿನ ಸುತ್ತಿನಲ್ಲಿ ಸೋಲು ಕಂಡಿದ್ದ ಭಾರತದ ಪಿ. ಹರಿಕೃಷ್ಣ ಇಲ್ಲಿ ನಡೆಯುತ್ತಿರುವ ಫಿಡೆ ಮಾಸ್ಕೊ ಗ್ರ್ಯಾನ್ ಪ್ರಿ ಚೆಸ್ ಟೂರ್ನಿಯಲ್ಲಿ  ಡ್ರಾ ಮಾಡಿಕೊಂಡಿದ್ದಾರೆ.

ಏಳನೇ ಸುತ್ತಿನ ಪಂದ್ಯದಲ್ಲಿ ಭಾರತದ ಆಟಗಾರ ರಷ್ಯಾದ ಗ್ರ್ಯಾಂಡ್‌ ಮಾಸ್ಟರ್‌ ಎವಗಿನಿ ತೊಮಶೆವ್ಸ್‌ಕಿ ಅವರೊಂದಿಗೆ ಪಾಯಿಂಟ್ಸ್ ಹಂಚಿಕೊಂಡರು. ವಿಶ್ವ ರ್‍ಯಾಂಕಿಂಗ್‌ನಲ್ಲಿ 16ನೇ ಸ್ಥಾನದಲ್ಲಿರುವ ಹರಿಕೃಷ್ಣ ಬಿಳಿ ಕಾಯಿಗಳೊಂದಿಗೆ ಆಡಿದರು. ಉತ್ತಮ ಆರಂಭ ಪಡೆದರು.
ಆದರೆ 24ನೇ ನಡೆಯಲ್ಲಿ ತಪ್ಪು ಲೆಕ್ಕಾಚಾರದಿಂದಾಗಿ ಅವರಿಗೆ ಹಿನ್ನಡೆಯಾಯಿತು. ಇದರ ಲಾಭ ಪಡೆದ ರಷ್ಯಾದ ಆಟಗಾರ ಗೆಲುವಿನ ಹಾದಿಯಲ್ಲಿದ್ದರು. ಆದರೆ ಡ್ರಾ ಮಾಡಿಕೊಳ್ಳುವಲ್ಲಿ ಭಾರತದ ಆಟಗಾರ ತಮ್ಮ ಜಾಣತನ ಮೆರೆದರು. ಪಂದ್ಯದ ಸಮಯ ಕೊನೆಗೊಳ್ಳಲು ಇನ್ನೇನು ಕೆಲವು ಸೆಕೆಂಡುಗಳು ಬಾಕಿ ಇದ್ದಾಗ ಇಬ್ಬರು ಆಟಗಾರರು ಡ್ರಾಗೆ ಸಮ್ಮತಿಸಿದರು.

Related posts

Leave a Reply