Header Ads
Header Ads
Header Ads
Breaking News

ಭಾರತೀಯ ಕ್ರಿಕೆಟ್ ಆಟಗಾರರ ವೇತನ ಹೆಚ್ಚಳಕ್ಕೆ ಬಿಸಿಸಿ‌ಐ ಅಸ್ತು ಕೊಹ್ಲಿ ಹಾಗೂ ಧೋನಿ ಮನವಿ ಮೇರೆಗೆ ಒಪ್ಪಿಗೆ ಸೂಚಿಸಿದ ಆಡಳಿತ ಸಮಿತಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಧೋನಿ ಅವರು ಆಟಗಾರರಿಗೆ ವೇತನ ಹೆಚ್ಚಳದ ಬೇಡಿಕೆಗೆ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದೆ. ಭಾರತ ಕ್ರಿಕೆಟ್ ಆಟಗಾರರಿಗೆ ವೇತನ ಹೆಚ್ಚಳ ನೀಡುವಂತೆ ವಿರಾಟ್ ಕೊಹ್ಲಿ ಬಿಸಿಸಿ‌ಐ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಬಿಸಿಸಿ‌ಐಗೆ ಸುಪ್ರೀಂ ಕೋರ್ಟ್ ರಚಿಸಿದ್ದ ಆಡಳಿತ ಸಮಿತಿ ಒಪ್ಪಿಗೆ ಸೂಚಿಸಿದೆ.

ಧೋನಿ ಮತ್ತು ಕೊಹ್ಲಿ ಸಿ‌ಒ‌ಎ ಮುಖ್ಯಸ್ಥ ವಿನೋದ್ ರೈ, ಡಯಾನಾ ಎಡುಜಿ ಮತ್ತು ಬಿಸಿಸಿ‌ಐ ಸಿ‌ಇ‌ಒ ರಾಹುಲ್ ಜೋಶ್ರಿ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದರು. ಬಳಿಕ ಆಡಳಿತ ಸಮಿತಿಯು ಭಾರತ ಕ್ರಿಕೆಟ್ ಆಟಗಾರರ ವೇತನ ಹೆಚ್ಚಳಕ್ಕೆ ಒಪ್ಪಿಕೊಂಡಿದೆ.

ಮುಂದಿನ ವರ್ಷ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಇಂಗ್ಲೆಂಡಿನಲ್ಲಿ ಭಾರತ ಪೂರ್ಣ ಸರಣಿಯನ್ನು ಆಡಲಿದೆ. ಅಲ್ಲಿನ ಪರಿಸ್ಥಿತಿಗಳೊಂದಿಗೆ ಒಗ್ಗಿಕೊಳ್ಳಲು ಎರಡು ವಾರಗಳ ಮುಂಚಿತವಾಗಿ ಭಾರತ ತಂಡ ಇಂಗ್ಲೆಂಡಿಗೆ ಪ್ರಯಾಣ ಬೆಳಸಲಿದೆ ಎನ್ನುವ ವಿಚಾರ ಸಭೆಯಲ್ಲಿ ತಿರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

Related posts

Leave a Reply