Header Ads
Header Ads
Header Ads
Breaking News

ಮತ್ತೊಂದು ದಾಖಲೆ ಬರೆದ ಕೊಹ್ಲಿ ನಾಯಕನಾಗಿ ವೇಗವಾಗಿ 2000 ರನ್ ಕಲೆಹಾಕಿದ ಸಾಧನೆ

 

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 21 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಕಡಿಮೆ ಇನಿಂಗ್ಸ್‌ಗಳಲ್ಲಿ 2000 ರನ್ ಪೂರೈಸಿದ ವಿಶ್ವದಾಖಲೆ ಮಾಡಿದರು.ಇಲ್ಲಿ ನಡೆದ ಸ್ಟೀವನ್ ಸ್ಮಿತ್ ಬಳಗದ ಎದುರಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಲ್ಪ ರನ್‌ಗಳಿಸಿ ವಿಕೆಟ್ ಒಪ್ಪಿಸಿದರೂ, ಈ ಸಾಧನೆ ಮಾಡಲು ಅವರಿಗೆ ಇಷ್ಟು ರನ್ ಸಾಕಾಯಿತು. ಇದಕ್ಕೂ ಮೊದಲು ಈ ದಾಖಲೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಎಬಿಡಿ ವಿಲಿಯರ್ಸ್ ಹೆಸರಿನಲ್ಲಿತ್ತು. ಇದಕ್ಕಾಗಿ ಅವರು 41 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಸದ್ಯ ನಾಯಕನಾಗಿ 39 ಪಂದ್ಯಗಳಲ್ಲಿ ತಂಡ ಮುನ್ನಡೆಸಿರುವ ವಿರಾಟ್, ಒಟ್ಟಾರೆ 198  ಪಂದ್ಯಗಳನ್ನಾಡಿದ್ದಾರೆ. 55.24 ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು, 30 ಶತಕ ಹಾಗೂ 45 ಅರ್ಧಶತಕದೊಂದಿಗೆ 8728 ರನ್ ಕಲೆಹಾಕಿದ್ದಾರೆ.

Related posts

Leave a Reply