Header Ads
Header Ads
Breaking News

ಶಾರ್ಜಾದಲ್ಲಿ ಜಿಪಿಎಲ್‌ನ ಟ್ರೋಫಿ ಅನಾವರಣ

ಜಿಪಿಎಲ್ ಗಂಗೊಳ್ಳಿ ಪ್ರೀಮಿಯರ್ ಲೀಗ್-5 ಶಾರ್ಜಾದ ಅಲ್ ಬಟಾಯೆ ಕ್ರಿಕೆಟ್ ಮೈದಾನದಲ್ಲಿ ಮಾರ್ಚ್ 8ರಂದು ನಡೆಯಲಿದ್ದು, ಇದರ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಿತು.


ಶಾರ್ಜಾದಲ್ಲಿ ನಡೆಯುವ ಜಿಪಿಎಲ್ ಕ್ರಿಕೆಟ್ ಟೋರ್ನಮೆಂಟ್ ಹಗಲು ಮತ್ತು ರಾತ್ರಿ ನಡೆಯಲಿದ್ದು, ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. ಜಿಪಿಎಲ್ ಟ್ರೋಫಿಯನ್ನು ಕ್ಯಾಪ್ರೈಸ್ ವಾಚಸ್‌ನ ಸಿಇಒ ಮತ್ತು ಚೇರ್ ಮ್ಯಾನ್ ಎಮ್.ಎಸ್. ಖಾನ್ ಮತ್ತು ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾಜಿ ಅಧ್ಯಕ್ಷರಾಧ ಶಿಶುಪಾಲ್ ಸಿಂಗ್ ಅವರು ಅನಾವರಣಗೊಳಿಸಿದರು.
ಆಟೋಡಿಯಲ್ ಮೂಡುಬಿದ್ರೆ, ಚಕ್ರವರ್ತಿ ಕುಂದಾಪುರ, ಡಿಜೆ ಚಾಲೆಂಜರ್‍ಸ್ ಪಡೀಲ್, ಇಲೆವೆನ್ ವಾರಿಯರಸ್ ಉಡುಪಿ, ಗೊಂಗೊಳ್ಳಿ ಸ್ಟ್ರೈಕರ್‍ಸ್, ಹೀಟ್‌ಶೀಲ್ಡ್ ಶಿಮಂತೂರು ಗ್ಲಾಡಿಯೇಟರ್‍ಸ್, ಎಮ್. ಎಮ್. ವಾರಿಯರ್‍ಸ್ ಯೆಯ್ಯಾಡಿ, ಟೀಮ್ ನೋರ್ದರ್‌ನ್ ಮಂಗಳೂರು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದು ಉತ್ತಮ ಪ್ರದರ್ಶನವನ್ನು ತೋರ್ಪಡಿಸಲಿದ್ದಾರೆ.
ಜಿಪಿಎಲ್ ಕ್ರಿಕೆಟ್ ಪಂದ್ಯಾಟವು ನಿಸಾರ್ ಅಹಮ್ಮದ್ ಖಾನ್, ಅಲ್ತಾಫ್ ಖಲೀಫ್, ಇನಾಯತ್ತುಲ್ಲ ಎಮ್.ಹೆಚ್, ಮೊಹಮ್ಮದ್ ಸಮೀರ್ ಶರೀಪ್ ಅವರು ನೇತೃತ್ವದಲ್ಲಿ ನಡೆಯಲಿದೆ.
ಈ ಸಂದರ್ಭ ಭಾರತ ಸರ್ಕಾರದ ಆಹಾರ ಸಚಿವಾಲಯದ ಸದಸ್ಯರಾದ ಯತೇಂದ್ರ ಸಿಂಗ್ ಚೌಹಾಣ್, ಬಾಲಿವುಡ್ ಚಲನಚಿತ್ರದ ನಿರ್ಮಾಪಕ ಸಂಜಯ್ ಸಿಂಗ್ಲಾ. ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮಾಜಿ ಅಧ್ಯಕ್ಷರಾಧ ಶಿಶುಪಾಲ್ ಸಿಂಗ್ ಹಾಗೂ ಕ್ರಿಕೆಟ್ ತಂಡದ ಸದಸ್ಯರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *